ರಾಮನಗರ: ನಿವೃತ್ತ ಎಎಸ್ ಐ ಪುತ್ರ ಸ್ನೇಹಿತನಿಂದಲೇ ಹತ್ಯೆಯಾಗಿರುವ ಘಟನೆ ನಡೆದಿದೆ.
ಪಾರ್ಟಿ ಸಂದರ್ಭದಲ್ಲಿ ಸರಿಯಾಗಿ ಪೆಗ್ ಹಾಕಲು ಬರುವುದಿಲ್ಲ ಎಂದು ನಡೆದ ಗಲಾಟೆಯಲ್ಲಿಯೇ ಸ್ನೇಹಿತನೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕನಕಪುರ ತಾಲೂಕಿನ ಕಲ್ಕೆರೆದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೀಪಕ್(23) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಮನೆ ಕಟ್ಟಿಸುತ್ತಿದ್ದೇನೆ ಪಾರ್ಟಿ ಕೊಡುತ್ತೇನೆ ಬಾ ಎಂದು ಆರೋಪಿ ಪ್ರಸಾದ್ ಕರೆದಿದ್ದ. ಹೀಗಾಗಿ ಸ್ನೇಹಿತರು ಭರ್ಜರಿ ಪಾರ್ಟಿ ಮಾಡುತ್ತಿದ್ದರು.
ಆಗ ಸರಿಯಾಗಿ ಪೆಗ್ ಹಾಕು ಎಂದು ಸ್ನೇಹಿತ ಪ್ರಸಾದ್ ಕೆನ್ನೆಗೆ ದೀಪಕ್ ಹೊಡೆದಿದ್ದಾನೆ. ಆಗ ಆರೋಪಿಗೆ ಕೋಪ ಬಂದಿದೆ. ಆ ಕ್ಷಣದಲ್ಲಿ ಸುಮ್ಮನಾಗಿ ದೀಪಕ್ ಜೊತೆಯೇ ಮಲಗುವಂತೆ ನಾಟಕವಾಡಿ ಮಲಗಿದ್ದಾಗ ತಲೆಗೆ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.