ಮೈಸೂರು: ದಂಪತಿ ಸಾಲಗಾರರ ಕಿರುಕುಳಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೈಸೂರಿನ ಆಲನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯರಗನಹಳ್ಳಿ ವಿಶ್ವ(34), ಸುಶ್ಮಾ(28) ಆತ್ಮಹತ್ಯೆ ಮಾಡಿಕೊಂಡನ ದಂಪತಿ. ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿ ಸಾಮಾಜಿಕ ಜಲತಾಣದಲ್ಲಿ (Social Media) ವೈರಲ್ ಮಾಡಿದೆ. ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಮೃತ ವಿಶ್ವ ತಮಗೆ ಪರಿಚಯಸ್ಥನಾಗಿದ್ದ ಶಿವು ಎಂಬಾತನಿಗೆ 5 ಲಕ್ಷ ರೂ. ಸಾಲ ಕೊಡಿಸಿದ್ದ. ಚೋರನಹಳ್ಳಿ ರಾಜಣ್ಣ ಎಂಬ ವ್ಯಕ್ತಿಯ ಹತ್ತಿರ ಚಿನ್ನಾಭರಣ ಅಡವಿಟ್ಟು ಹಾಗೂ ಮತ್ತೆ ಹಲವರ ಬಳಿ ಹಣ ಪಡೆದು ಶಿವುಗೆ ಸಾಲ ಕೊಡಿಸಿದ್ದರು. ಆದರೆ, ಶಿವು ಮರಳಿ ನೀಡದೆ, ತಕರಾರು ಮಾಡುತ್ತಿದ್ದ. ಇನ್ನೊಂದೆಡೆ ಸಾಲಗಾರರು ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಮನನೊಂದು ಸಾಲ ನೀಡಿದ್ದ ರಾಜಣ್ಣ ವಿರುದ್ಧ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.