ಪ್ರೊಪೋಸ್ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದ ಜೋಡಿ; ಮುಂದೇನಾಯ್ತ ನೋಡಿ..!
ಪ್ರೀತಿಸಿದವರಿಗೆ ವಿಭಿನ್ನ ರೀತಿಯಲ್ಲಿ ಎಲ್ಲರಿಗಿಂತ ಡಿಫರೆಂಟ್ ಆಗಿ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡಬೇಕು. ಜೀವನವಿಡಿ ನೆನಪಿನಲ್ಲೇ ಉಳಿಯುವಂತಹ ರೀತಯಲ್ಲಿ ಅದು ಇರಬೇಕು ಅಂತ ಅನೇಕರು ತುಂಬ ತುಂಬ ವಿಭಿನ್ನ ರೀತಿಗಳಲ್ಲಿ ಪ್ರಪೋಸ್ ಮಾಡಿರೋದನ್ನ ನಾವು ನೋಡಿದ್ದೇವೆ. ಕೇಳಿರುತ್ತೇವೆ. ಆದರೆ ಇಲ್ಲೊಂದು ಜೋಡಿಯೇ ಇದೇ ರೀತಿ ಡಿಫರೆಂಟ್ ಆಗಿ ಪ್ರಪೋಸ್ ಮಾಡಲು ಪ್ರಪಾತಕ್ಕೆ ಬಿದ್ದಿರೋ ಘಟನೆ ನಡೆದಿದೆ. ಆದ್ರೆ ಅದೃಷ್ಟವಶಾತ್ ಟೈಮ್ ಚೆನ್ನಾಗಿತ್ತು. ಹೀಗಾಗಿ ಈ ಜೋಡಿ ಬದುಕುಳಿದಿದೆ. ಇಂತಹದ್ದೊಂದು ಘಟನೆ ಆಸ್ಟ್ರಿಯಾದಲ್ಲಿ ನಡೆದಿದೆ.
ಕೊರೊನಾ ರೂಲ್ಸ್ ವಿರೋಧಿಸಿ ಮೆಟ್ರೋದಲ್ಲಿ ಲವರ್ಸ್ ಮಾಡಿದ್ದೇನು ಗೊತ್ತಾ..?
ಹೌದು.. 27 ವರ್ಷದ ಯುವಕ 32 ವರ್ಷದ ಮಹಿಳೆಯನ್ನ ಪ್ರೀತಿಸುತ್ತಿದ್ದನು. ಆಕೆಯ ಬಳಿ ತನ್ನ ಪ್ರೀತಿಯನ್ನ ಹೇಳಿಕೊಳ್ಳಲು ಪ್ಲಾನ್ ಮಾಡಿದ್ದ. ಹೀಗೆಯೇ ಡಿಫರೆಂಟ್ ಆಗಿ ಪ್ರಪೋಸ್ ಮಾಡೋ ಪ್ಲಾನ್ ಮಾಡಿದ್ದ ಯುವಕ , ಯುವತಿಯನ್ನ ಎತ್ತರದ ಬಂಡೆಕಲ್ಲಿನ ಪ್ರದೇಶಕ್ಕೆ ಹುಡುಗಿಯನ್ನು ಕರೆದೊಯ್ದಿದ್ದಾನೆ. ಅಲ್ಲಿ ಆಕೆಗೆ ಪ್ರಪೋಸ್ ಮಾಡಿದ್ದಾನೆ. ಯುವಕನ ಪ್ರೇಮ ನಿವೇದನೆಯನ್ನ ಒಪ್ಪಿಕೊಂಡ ಮಹಿಳೆ ಖುಷಿಯಿಂದ ಕುಣಿದಾಡಿದ್ದಾಳೆ. ಹೀಗೆಯೇ ಖುಷಿಯಲ್ಲಿ ತೇಕಲಾಡ್ತಿದ್ದ ಆಕೆ ಕಾಲು ಜಾರಿ ಬಂಡೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ.
ಸೋಂಕಿತರು, ಸಾವಿನ ಸಂಖ್ಯೆಯಲ್ಲಿ ಭಾರತವನ್ನೂ ಮೀರಿಸಿದೆ ನೋಡಿ ಅಮೆರಿಕಾ!
ಮಹಿಳೆ ಸುಮಾರು 650ಮೀಟರ್ ಕೆಳಗೆ ಹಿಮದ ರಾಶಿ ಮೇಲೆ ಬಿದ್ದಿದ್ದಾಳೆ. ಇತ್ತ ಆಕೆಯ ಹಿಂದೆಯೇ ಯವಕನು ಕೆಳಗೆ ಹಾರಿದ್ದಾನೆ. ಆದರೆ ಆತ ಹಾರಿದ ರಭಸದಲ್ಲಿ ಕೊಂಬೆಯಲ್ಲಿ ಸಿಲುಕಿಕೊಂಡಿದ್ದಾನೆ. ಇತ್ತ ಇವರಿಬ್ಬರನ್ನು ಕಂಡ ಸ್ಥಳೀಯರು ಈ ಜೋಡಿಯನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಟೈ ಸರಿಯಾಗಿತ್ತು. ಅದೃಷ್ಟ ಚೆನ್ನಾಗಿತ್ತು. ಹೀಗಾಗಿ ಇಬ್ಬರೂ ಯಾವುದೇ ತೊಂದರೆಯಿಲ್ಲದೇ ಬಚಾವಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








