ಕೊರೊನಾ ಟಫ್ ರೂಲ್ಸ್ ವಿರೋಧಿಸಿ ಮೆಟ್ರೋದಲ್ಲಿ ಲವರ್ಸ್ ಮಾಡಿದ್ದೇನು ಗೊತ್ತಾ..?
ಮಾಸ್ಕೋ : ಹೆಮ್ಮಾರಿ ಕೊರೊನಾ ವೈರಸ್ ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರಗಳು ಕಠಿಣಕ್ರಮಗಳನ್ನು ತೆಗೆದುಕೊಳ್ತಿವೆ.
ಆದ್ರೆ ರಷ್ಯಾದ ಯೆಕಟೆರಿನ್ಬರ್ಗ್ ನಲ್ಲಿ ಸರ್ಕಾರ ವಿಧಿಸಿರುವ ಕೊರೊನಾ ಟಫ್ ರೂಲ್ಸ್ ವಿರೋಧಿಸಿ ಯುವ ಜೋಡಿ ಮೆಟ್ರೋದಲ್ಲಿ ತುಟಿಗೆ ತುಟಿ ಸೇರಿಸಿದೆ.
ಮೆಟ್ರೋದಲ್ಲಿ ಈ ಜೋಡಿ ಕಿಸ್ ಮಾಡೋದ್ರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
ಇನ್ನು ಈ ವಿಚಾರವಾಗಿ ಜೋಡಿ ಸ್ಥಳೀಯ ವೆಬ್ ಸೈಟ್ ಜೊತೆ ಮಾತನಾಡಿದ್ದು, ಈ ರೀತಿ ಸಾರ್ವಜನಿಕವಾಗಿ ಕಿಸ್ ಮಾಡೋ ಮೂಲಕ ಯಾರ ಭಾವನೆಗಳಿಗೆ ಧಕ್ಕೆ ಉಂಟು ಮಾಡೋ ಉದ್ದೇಶ ನಮಗಿಲ್ಲ.
ಸರ್ಕಾರ ಕೊರೊನಾ ಹರಡುವಿಕೆಯನ್ನ ತಡೆಯೋ ದೃಷ್ಠಿಯಿಂದ ಕನ್ಸರ್ಟ್, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ ನಡೆಯುತ್ತಿದ್ದ ಹಲವು ಕಾರ್ಯಕ್ರಮಗಳನ್ನು ಬಂದ್ ಮಾಡಿದೆ.
ಇದರಿಂದ ಈ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತ ಬದುಕು ಕಟ್ಟಿಕೊಂಡಿದ್ದ ಸಂಗೀತ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೆಟ್ರೋದಲ್ಲಿ ಎಷ್ಟು ಜನ ಸೇರಿದ್ರೂ ಸರ್ಕಾರ ಕ್ರಮಕ್ಕೆ ಮುಂದಾಗಿಲ್ಲ. ನಮಗೆ ಮಾತ್ರ ಯಾಕೆ ಈ ಕಠಿಣ ನಿಮಯವೆಂದು ಕಿಸ್ಸಿಂಗ್ ಕಪಲ್ ಆಕ್ರೋಶ ಹೊರ ಹಾಕಿದೆ. ಅಲ್ಲದೆ ಬಹುತೇಕರು ನಮಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel