ಬಾಗಲಕೋಟೆ ಜಿಲ್ಲೆಯ ಮುಚಖಂಡಿ ಗ್ರಾಮದ ರಾಜು ಕಾಳೆ ಎಂಬುವವರ ಹಸು ಕರುವಿಗೆ ಜನ್ಮ ನೀಡಿದ ನಂತರ ಅದು ಅನಾರೋಗ್ಯಕ್ಕೆ ತುತ್ತಾಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರು ಸೇರಿ ಕರುವಿನ ಜೊತೆಗೆ ಹಸುವನ್ನು ಬಾಗಲಕೋಟೆ ನಗರದ ನವನಗರದಲ್ಲಿರುವ ಪಶು ಆಸ್ಪತ್ರೆಗೆ ಕರೆದೊಯ್ದಿದ್ದರು. ನಂತರ ಮರಳಿ ಬರುವಾಗ ಯುವಕರು ಕರುವನ್ನು ಬೊಲೆರೋ ವಾಹನದಲ್ಲಿ ವಾಪಸ್ ಕರೆತರುತ್ತಿದ್ದರು.
ಆ ಕರುಳಿನ ಕೂಗು ಕಂಡು-ಕೇಳಿದವರ ಕರುಳು ಹಿಂಡುವಂತಾಗಿದೆ. ಅಂಬಾ ಅನ್ನುತ್ತಿದ್ದ ತನ್ನ ಕಂದನಿಗಾಗಿ ತಾಯಿ ಹಸು ಬೊಲೆರೋ ವಾಹನ ಬೆನ್ನಟ್ಟಿದ್ದು ಕಂಡವರ ಕರುಳು ಹಿಂಡುವಂತೆ ಮಾಡಿದೆ.
ಕರುವನ್ನು ವಾಹನದಲ್ಲಿ ಮನೆಗೆ ತೆಗೆದುಕೊಂಡು ಹೋಗುವ ವೇಳೆ ತನ್ನ ಕರುವಿಗಾಗಿ ಬೊಲೆರೋ ವಾಹನವನ್ನು ತಾಯಿ ಹಸು ಬೆನ್ನಟ್ಟಿದೆ. ಸುಮಾರು 5 ಕಿಲೋ ಮೀಟರ್ ವರೆಗೆ ವಾಹನ ಹಿಂಬಾಲಿಸಿದೆ. ಇದನ್ನು ನೋಡಿದವರ ಕರುಳು ಹಿಂಡಿದಂತಾಗಿದೆ.