ಕೋಲಾರ: ಪತಿಯೊಂದಿಗೆ ಸಂಸಾರ ಮಾಡಲು ಒಪ್ಪದ ಮಗಳನ್ನೇ ತಂದೆ ಸುಟ್ಟು ಹಾಕಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕು ಮುಸ್ಟೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿ ನಂತರ ತಾನೇ ಪೊಲೀಸ್ ಠಾಣೆಗೆ ಹೋಗಿ, ಮಗಳು ಕಾಣೆಯಾಗಿದ್ದಾಳೆಂದು ದೂರು ನೀಡಿದ್ದಾನೆ. ಅರ್ಚಿತಾ ಕೊಲೆಯಾದ ಮಗಳಾಗಿದ್ದರೆ, ರವಿ ಕೊಲೆ ಮಾಡಿರುವ ಆರೋಪಿ ತಂದೆಯಾಗಿದ್ದಾನೆ.
ಅರ್ಚಿತಾ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಇದಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬೇರೆಯೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿದ್ದಾರೆ. ಆದರೆ, ಪತಿಯೊಂದಿಗೆ ಸಂಸಾರ ಮಾಡಲು ಮಗಳು ನಿರಾಕರಿಸಿದ್ದ ಸುಟ್ಟು ಹಾಕಿದ್ದಾನೆ ಎನ್ನಲಾಗಿದೆ.