ಮಂಗಳೂರು: ಮಹಿಳೆಯೊಬ್ಬರ ಮೃತದೇಹವೊಂದು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಚಾರೆ ಎಂಬಲ್ಲಿ ನಡೆದಿದೆ.
ಮಾಚಾರೆಯ ಜ್ಯೋತಿ ನಗರದಲ್ಲಿನ ಮನೆಯ ಹತ್ತಿರ ಈ ಘಟನೆ ನಡೆದಿದೆ. ಶಶಿಕಲಾ(25) ಎಂಬುವವರ ಶವ ಪತ್ತೆಯಾಗಿದೆ. ಶಶಿಕಲಾ ಅವರನ್ನು ಪತಿಯೇ ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪತಿ ಸುಧಾಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.








