ಚಿತ್ರದುರ್ಗ: 6 ವರ್ಷದ ಬಾಲಕನನ್ನು ನಾಯಿಯೊಂದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಈ ಘಟನೆ ನಗರದ ಜೆಸಿಆರ್ ಬಡಾವಣೆಯಲ್ಲಿ ನಡೆದಿದೆ. ಮನೆ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ 6 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದೆ. ಕೈ ಕಾಲುಗಳಿಗೆ ಸೇರಿ 11 ಕಡೆ ಕಚ್ಚಿ ಗಾಯಗೊಳಿಸಿವೆ.
ಜೆಸಿಆರ್ ಬಡಾವಣೆಯ 6ನೇ ಅಡ್ಡರಸ್ತೆಯ ಜ್ಯೋತಿ-ನಾಗರಾಜ್ ದಂಪತಿಯ ಪುತ್ರ ಸಾಯಿ ಚರಣ್ (6) ಗಾಯಗೊಂಡ ಬಾಲಕ ಎನ್ನಲಾಗಿದೆ. ಎರಡು ನಾಯಿಗಳು, 11 ಕಡೆ ಗಾಯಿಗೊಳಿಸಿವೆ. ಕೂಡಲೇ ಅಲ್ಲಿನ ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ.