ರಾಮನಗರ: ರೈತರೊಬ್ಬರು ಕಾಡಾನೆಯನ್ನು ರಹಸ್ಯವಾಗಿ ಮಣ್ಣು ಮಾಡಿರುವ ಘಟನೆಯೊಂದು ನಡೆದಿದೆ.
ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕಾಡಾನೆ ಕಾಟ ಹೆಚ್ಚಾಗಿ ಅದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ರೈತರೊಬ್ಬರು ತೋಟಕ್ಕೆ ವಿದ್ಯುತ್ ತಂತಿ ಹಾಕಿದ್ದರು. ತಂತಿ ಸ್ಪರ್ಶಿಸಿ ಆನೆ ಸಾವನ್ನಪ್ಪಿತ್ತು. ಆದರೆ, ತಪ್ಪಿಸಿಕೊಳ್ಳುವುದಕ್ಕಾಗಿ ಆನೆಯನ್ನು ರಹಸ್ಯವಾಗಿ ಹೂತು ಹಾಕಿದ್ದಾರೆ ಎನ್ನಲಾಗಿದೆ.
ಮೂರು ದಿನಗಳ ನಂತರ ಆನೆಯ ಕಳೇಬರವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಆದರೆ, ರೈತ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ನಂಜೇಗೌಡ ಎಂಬ ರೈತ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ತಂತಿ ಸ್ಪರ್ಶಿಸಿ 16 ವರ್ಷದ ಗಂಡಾನೆ ಸಾವನ್ನಪ್ಪಿದೆ ಎನ್ನಲಾಗಿದೆ.