ತಂದೆಯೊಬ್ಬ ತನ್ನ ಮಗನನ್ನೇ ಕೊಲೆ ಮಾಡಿ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಆದರ್ಶ್ (28) ಎಂದು ಗುರುತಿಸಲಾಗಿದ್ದು, ಆತನ ತಂದೆ ಜಯರಾಮಯ್ಯ(58) ಕೊಲೆ ಮಾಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಆದರ್ಶ್ ದಿನನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇತ್ತೀಚೆಗೆ ತಾಯಿಯ ಬಳಿಯೂ ಕುಡಿಯಲು ಹಣ ಕೇಳಿದ್ದ. ಈ ಸಂದರ್ಭದಲ್ಲಿ ತಾಯಿಗೆ ಮನಬಂದಂತೆ ಥಳಿಸಿದ್ದ ಎನ್ನಲಾಗಿದೆ. ಪ್ರತಿ ದಿನ ಕುಡಿದು ಬಂದು ಮನೆಯಲ್ಲಿ ಎಲ್ಲರೊಂದಿಗೆ ಜಗಳವಾಡುತ್ತಿದ್ದ ಹೀಗಾಗಿ ಮನೆಯವರೆಲ್ಲ ಬೇಸತ್ತು ಹೋಗಿದ್ದರು. ತಾಯಿ ಸೇರಿದಂತೆ ಎಲ್ಲರ ಮೇಲೆ ಹಲ್ಲೆ ಮಾಡಿದ್ದಕ್ಕೆ ತಂದೆ ಜಯರಾಮಯ್ಯ ಬೇಸತ್ತು ಹೋಗಿದ್ದ. ಹೀಗಾಗಿ ಜಗಳ ನಡೆದ ಸಂದರ್ಭದಲ್ಲಿ ಸಿಟ್ಟಿನ ಬರದಲ್ಲಿ ಹೊಡೆದಿದ್ದಾರೆ.
ಶುಕ್ರವಾರ ರಾತ್ರಿ ಬಾರ್ ಹತ್ತಿರವೇ ತಂದೆ ಮಗನಿಗೆ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಆದರ್ಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ (Doddabelavangala Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








