ತಿರುವನಂತಪುರಂ: ಮಹಿಳಾ ಪೊಲೀಸ್ ಒಬ್ಬರು 4 ತಿಂಗಳ ಮಗುವಿಗೆ ಸ್ವತಃ ಎದೆ ಹಾಲು ಉಣಿಸಿ ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ.
ಕೇರಳದ ಕೊಚ್ಚಿಯಲ್ಲಿ (Kochi Kerala) ಈ ಘಟನೆ ನಡೆದಿದ್ದು, ಸದ್ಯ ಮಹಿಳಾ ಪೊಲೀಸ್ ಅಧಿಕಾರಿಗೆ ಇಲಾಖೆ ಮತ್ತು ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಹಾರ (Bihar) ಮೂಲದ ಮಗುವಿನ ತಾಯಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಆನಂತರ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಆ ತಾಯಿಯನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಪುಟ್ಟ ಕಂದಮ್ಮನ ಆರೈಕೆಗೆ ಎರ್ನಾಕುಲಂ ವನಿತಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಆರ್ಯ ಅವರು ಮುಂದಾಗಿದ್ದಾರೆ. ಆರ್ಯ ಅವರ ಕಾರ್ಯಕ್ಕೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.