ಬಾಗಲಕೋಟೆ: ಚಲಿಸುತ್ತಿದ್ದ ಬಸ್ ನಲ್ಲಿಯೇ ಇಬ್ಬರು ಕುಡುಕರ ಮಧ್ಯೆ ಫೈಟ್ ನಡೆದಿದ್ದು, ವ್ಯಕ್ತಿಯೊಬ್ಬ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಮುಧೋಳ -ಕುಳಲಿ ರಸ್ತೆಯಲ್ಲಿ ನಡೆದಿದೆ. ಸೋರಗಾವಿ ಗ್ರಾಮದ ಪ್ರಹ್ಲಾದ್ ಮಾದರ (38) ಸಾವನ್ನಪ್ಪಿದ ವ್ಯಕ್ತಿ ಎನ್ನಲಾಗಿದೆ. ಈ ಬಸ್ ಮುಧೋಳದಿಂದ ಬನಹಟ್ಟಿ ಪಟ್ಟಣಕ್ಕೆ ಹೊರಟಿತ್ತು.
ಈ ಸಂದರ್ಭದಲ್ಲಿ ಇಬ್ಬರು ಕುಡುಕರ ಮಧ್ಯೆ ಜಗಳ ನಡೆದಿದೆ. ಆ ವೇಳೆ ಓರ್ವ ಕುಡುಕ ಮತ್ತೊಬ್ಬ ಕುಡುಕನನ್ನು ಬಸ್ ನಿಂದ ತಳ್ಳಿದ್ದಾನೆ. ಚರಂಡಿಗೆ ಬಿದ್ದ ಪ್ರಹ್ಲಾದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಾಗಿ ಬಲೆ ಬೀಸಿದ್ದಾರೆ.