ಚೀನಾದ ಮಿಂಗ್ಟಾಯ್ ಪವರ್ ಪ್ಲಾಂಟ್‌ನಲ್ಲಿ ಬೆಂಕಿ, 8 ಸಾವು 5 ಜನರಿಗೆ ಗಾಯ
ಚೀನಾದ ಉತ್ತರ ಶಾಂಕ್ಸಿ ಪ್ರಾಂತ್ಯದ ಮಿಂಗ್ಟಾಯ್ ಪವರ್ ಪ್ಲಾಂಟ್‌ನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಢದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸೋಮವಾರ ಉದ್ಯೋಗಿಗಳ ವಸತಿ ಘಟಕದಲ್ಲಿ ಬೆಂಕಿ ಸಂಭವಿಸಿದೆ ಎಂದು CGTN ವರದಿ ಮಾಡಿದೆ. “ಶೌಯಾಂಗ್ ಕೌಂಟಿಯ ಮಿಂಗ್ಟಾಯ್ ಪವರ್ ಪ್ಲಾಂಟ್‌ನಲ್ಲಿ ಸೋಮವಾರ ನೌಕರರ ವಸತಿಗೃಹದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. CGTN ಸುದ್ದಿ ಸಂಸ್ಥೆ ವರದಿ ಮಾಡಿದೆ.








