ಪುನೀತ್ ಕನಸಿನ ‘ಗಂಧದಗುಡಿ’’ ಸಾಕ್ಷ್ಯ ಚಿತ್ರದ ಟೀಸರ್ ರಿಲೀಸ್
ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನ ಅಗಲಿ ಒಂದು ತಿಂಗಳು ಕಳೆಯುತ್ತಾ ಬಂತು. ಈಗಲೂ ಅವರು ನಮ್ಮೊಂದಿಗಿಲ್ಲ ಎನ್ನುವುದನ್ನ ಅರಗಿಸಿಕೊಳ್ಳಲು ಕಷ್ಟ ಸಾಧ್ಯ. ಪುನೀತ್ ರಾಜ್ ಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್ ಅಂತನೇ ಹೇಳಲಾಗುವ ಗಂಧದಗುಡಿ ಸಾಕ್ಷ್ಯ ಚಿತ್ರದ ಟೀಸರ್ ರಿಲೀಸ್ ಆಗಿದೆ.
ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಟೀಸರ್ ಬಿಡುಗಡೆಗೊಳಿಸಿದರು. ಕಣ್ಮನ ಸೆಳೆಯುವ ಪ್ರಕೃತಿ ಸಂಪತ್ತು, ಪ್ರಾಣಿ ಸಂಪತ್ತನ್ನ ಟೀಸರ್ ನಲ್ಲಿ ತೋರಿಸಿಲಾಗಿದೆ. ಖ್ಯಾತ ವೈಲ್ಡ್ ಲೈಪ್ ಫೋಟೋಗ್ರಾಫ್ರ್ ಅಮೋಘ ವರ್ಷ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಪಿ ಆರ್ ಕೆ ಆಡಿಯೋ ಯ್ಯೂಟೂಬ್ ಚಾನೆಲ್ ನಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.
ಈ ಹಿಂದೆ ರಾಜ್ ಕುಮಾರ್ ಮತ್ತು ಶಿವ ರಾಜ್ ಕುಮಾರ್ ಇಬ್ಬರು ಗಂಧದಗುಡಿ ಹೆಸರಿನ ಟೈಟಲ್ನಲ್ಲಿ ಚಿತ್ರ ನಿರ್ಮಿಸಿದ್ದವು ಎರಡು ಚಿತ್ರಗಳು ಸೂಪರ್ ಹಿಟ್ ಆಗಿದ್ದವು ಗ ಪುನೀತ್ ರಾಜ್ ಕುಮಾರ್ ಅವರು ಮತ್ತೊಮ್ಮೆ ಗಂಧದಗುಡಿ ಟೈಟಲ್ ನಲ್ಲಿ ಕರ್ನಾಟಕದ ಪ್ರಾಣಿ ಜಗತ್ತನ್ನ ಸಿನಿ ಪ್ರೇಮಿಗಳಿಗೆ ಪರಿಚಯಿಸಲಿದ್ದಾರೆ.