ಕುರಿಗಾಹಿಯೊಬ್ಬರನ್ನು ಕಾಡಾನೆ ತುಳಿದು ಕೊಂದಿರುವ ಘಟನೆ ಜಿಲ್ಲೆಯ ಕನಕಪುರ ಹೊರವಲಯದಲ್ಲಿ ನಡೆದಿದೆ.
ಬನ್ನಿಮೂಡ್ಲು ಗ್ರಾಮದ ಐವತ್ತು ಐದು ವರ್ಷದ ಚಂದ್ರಣ್ಣ ಕಾಡಾನೆ ದಾಳಿಗೆ ಬಲಿಯಾಗಿರುವ ವ್ಯಕ್ತಿ ಎನ್ನಲಾಗಿದೆ. ಗ್ರಾಮಸ್ಥರು ಎಷ್ಟೇ ಎಚ್ಚರಿಕೆ ನೀಡಿದರೂ ಕಾಡಿನೊಳೆಗೆ ಚಂದ್ರಣ್ಣ ಹೋಗಿದ್ದ ಎನ್ನಲಾಗಿದೆ. ನಂತರ ಎಷ್ಟೇ ಹೊತ್ತಾದರೂ ಮರಳಿ ಮನೆಗೆ ಬಂದಿಲ್ಲ. ಹೀಗಾಗಿ ಕುಟುಂಬಸ್ಥರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬನ್ನೇರುಘಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದಾಗ ಚಂದ್ರಣ್ಣ ಶವವಾಗಿ ಪತ್ತೆಯಾಗಿದ್ದಾರೆ.