ಕಾರವಾರ: ಕಳ್ಳತನದ ಆರೋಪದಲ್ಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸ್ಪರ್ಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಂಕೋಲದ (Ankola) ಬಾಳೆಗದ್ದೆ ಗ್ರಾಮದ ಯುವಕ ಭಾಸ್ಕರ್ ಸಿದ್ದಿ ಬಂಧನಕ್ಕೊಳಗಾದ ಆರೋಪಿ ಎನ್ನಲಾಗಿದ. ಈತ ಯಲ್ಲಾಪುರದ ಅಂಗಡಿಯೊಂದರಲ್ಲಿ ಹಣ ಕಳ್ಳತನ ಮಾಡಿದ್ದು, ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಕಳ್ಳತನ ಮಾಡಿದ್ದ 14,300 ರೂ. ವಶಕ್ಕೆ ಪಡೆಯಲಾಗಿದ್ದು, ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.