RRR ಗೆ ಅಪರೂಪದ ಗೌರವ ಸೂಚಿಸಿದ ಗೂಗಲ್ ಸರ್ಚ್…
RRR ಚಿತ್ರಕ್ಕೆ ಅಪರೂಪದ ಗೌರವ ಸಿಕ್ಕಿದೆ. ಸದ್ಯ RRR ಸಿನಿಮಾಗೆ ಸಂಬಂಧಿಸಿದ ಸುದ್ದಿಯೊಂದು ಟ್ವೀಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ ಎನ್ಟಿಆರ್ ಅಭಿನಯದ ಈ ಚಿತ್ರವು ಈ ವರ್ಷ ಮಾರ್ಚ್ 25 ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಪಡೆದಿತ್ತು.
ರಾಜಮೌಳಿಯ ಮೇಕಿಂಗ್, ರಾಮ್ ಚರಣ್ ಮತ್ತು ತಾರಕ್ ಆಕ್ಟಿಂಗ್ ಸಿನಿಮಾವನ್ನ ಹೊಸ ಎತ್ತರಕ್ಕೆ ಕೊಂಡೊಯ್ದಿತ್ತು. ಬಿಡುಗಡೆಯ ನಂತರ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆಗೂ ಮೀರಿದ ಗಳಿಕೆ, ಯಶಸ್ಸು ಪಡೆದಿತ್ತು. ಇದೀಗ ಸೋಶಿಯಲ್ ಮೀಡಿಯಾದಲ್ಲಿ RRR ಚಿತ್ರ ಮತ್ತೆ ಟ್ರೆಂಡಿಂಗ್ ನಲ್ಲಿದೆ. ಅದಕ್ಕೆ ಕಾರಣ ಗೂಗಲ್.
ನೀವು ಗೂಗಲ್ ಸರ್ಚ್ ನಲ್ಲಿ RRR ಎಂದು ಟೈಪ್ ಮಾಡಿದಾಗ ರಾಮ್ ಚರಣ್ ಬಳಸಿದ ಕುದುರೆ ಹಾಗೂ ಈ ಸಿನಿಮಾದಲ್ಲಿ ತಾರಕ್ ಬಳಸಿರುವ ಬೈಕ್ ಒಂದರ ಹಿಂದೆ ಒಂದರಂತೆ ಚಲಿಸುತ್ತಿವೆ. ಇದು ಸದ್ಯದ ಹಾಟ್ ಟಾಪಿಕ್. ಈ ರೀತಿಯ ಕೆಲವು ವಿಶಿಷ್ಟ ಅಂಶಗಳನ್ನು Google ಗುರುತಿಸುತ್ತದೆ. ಇದುವರೆಗೆ ಯಾವ ಭಾರತೀಯ ಸಿನಿಮಾಗೂ ಸಿಗದ ಗೌರವ RRR ಗೆ ಸಿಕ್ಕಿದೆ.
🏍 🐎
Thank you @Google for surprising us and acknowledging the the GLOBAL PHENOMENON & Popularity of RRR !! 🤩❤️
Search for RRR in google and post screenshot/video to us with #RRRTakeOver #RRRMovie pic.twitter.com/1f509prJJU
— RRR Movie (@RRRMovie) August 13, 2022
ಈಗಾಗಲೇ ನಿರ್ದೇಶಕ ರಾಜಮೌಳಿ ಅವರ ಪ್ರತಿಭೆಯನ್ನು ಹಾಲಿವುಡ್‌ನ ತಾರೆಯರು ಹೊಗಳಿದ್ದಾರೆ. ಬಾಹುಬಲಿ ಸರಣಿಯ ಮೂಲಕ ಜಕ್ಕಣ್ಣ ದಕ್ಷಿಣ ಚಿತ್ರರಂಗದ ಶಕ್ತಿಯನ್ನ ಜಗತ್ತಿಗೆ ತೋರಿಸಿದ್ದರು. RRR ಕೂಡ ಅದೇ ಶ್ರೇಣಿಗೆ ಹತ್ತಿರದ ಸಿನಿಮಾ..