`ಪೊಗರು’ ಸಿನಿಮಾ ನೋಡಿ `ಇದೊಂದು ಮೈಲಿಗಲ್ಲು’ ಎಂದ ಪ್ರಶಾಂತ್ ನೀಲ್
ಬೆಂಗಳೂರು : ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಸದ್ಯ ಗಲ್ಲಾಪೆಟ್ಟಿಗೆಯನ್ನ ಕೊಳ್ಳೆ ಹೊಡೆಯುತ್ತಿದೆ. ಒಂದಿಷ್ಟು ವಿವಾದಗಳ ಸಿನಿಮಾಗೆ ಅಂಟಿಕೊಂಡರೂ ಸಿನಿ ರಸಿಕರ ಹೃದಯ ಗೆಲ್ಲುವಲ್ಲಿ ಪೊಗರು ಶಿವ ಸಕ್ಸಸ್ ಆಗಿದ್ದಾರೆ.
ನಿರ್ದೇಶಕ ನಂದಕಿಶೋರ್ ಮೇಕಿಂಗ್.. ಚಂದನ ಶೆಟ್ಟಿ ಚಿಂದಿ ಮ್ಯೂಸಿಕ್.. ಜೊತೆಗೆ ಒಂಟಿ ಸಲಗದ ಅಬ್ಬರದಂತೆ ಧ್ರುವ ಸರ್ಜಾ ಪರ್ಪಾಮೆನ್ಸ್.. ಸಿನಿಮಾವನ್ನ ಬೇರೆ ಲೆವೆಲ್ಲಿಗೆ ಕರೆದೋಯ್ದಿದೆ.
ಸದ್ಯ ಈ ಸಿನಿಮಾ 45 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಸ್ಯಾಂಡಲ್ ವುಡ್ ನಲ್ಲಿ ದಾಖಲೆ ಬರೆದಿದೆ. ಈ ಮಧ್ಯೆ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಪೊಗರು’ ಚಿತ್ರಕ್ಕೆ ಫುಲ್ ಮಾಕ್ರ್ಸ್ ನೀಡಿದ್ದಾರೆ.
ಭರ್ಜರಿ ಪ್ರದರ್ಶನ ಕಾಣುತ್ತಿರುವ ಪೊಗರು ಚಿತ್ರ ವೀಕ್ಷಿಸಿ ಮೆಚ್ಚಿಕೊಂಡಿರುವ ಪ್ರಶಾಂತ್, ಚಿತ್ರತಂಡಕ್ಕೆ ಟ್ವಿಟ್ಟರ್ ನಲ್ಲಿ ಶಹಬ್ಬಾಸ್ ಹೇಳಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಪೊಗರು ಸಿನಿಮಾವನ್ನ ಇದೊಂದು ಮೈಲಿಗಲ್ಲು ಎಂದಿರುವ ಪ್ರಶಾಂತ್ ನೀಲ್, ನಿರ್ದೇಶಕ ನಂದಕಿಶೋರ್ ಹಾಗೂ ನಟಿ ರಶ್ಮಿಕಾ ಮಂದಣ್ಣವನ್ನು ಶ್ಲಾಘಿಸಿದ್ದಾರೆ.
ಮುಖ್ಯವಾಗಿ ಧ್ರುವ ಸರ್ಜಾ ಅವರ ಅಭಿನಯ, ಶ್ರದ್ಧೆ, ಕಮಿಟ್ ಮೆಂಟ್ ಗೆ ಬಾಯ್ತುಂಬ ಹೊಗಳಿದ್ದಾರೆ.
ಸಿನಿಮಾ ಕುರಿತು ನಿಮಗಿರುವ ಫ್ಯಾಶನ್ ಹಾಗೂ ಪಾತ್ರಕ್ಕೆ ನೀವು ಮಾಡಿರುವ ತಯಾರಿ, ತ್ಯಾಗ ಅದ್ಭುತ. ಚಿತ್ರದ ಯಶಸ್ಸಿಗೆ ನೀವು ಅರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
