ADVERTISEMENT
Wednesday, February 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮುಂಗಾರು ಮಳೆಯಲ್ಲಿ ಮಿಂದೆದ್ದ “ಪ್ರೀತಿ”ಯ ಮನದ ಕಡಲು..!

A Heart Drenched in Love Amidst the Monsoon Showers

Shwetha by Shwetha
June 2, 2025
in Newsbeat, Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಮುಂಗಾರು ಮಳೆಯಲ್ಲಿ ಮಿಂದೆದ್ದ “ಪ್ರೀತಿ”ಯ ಮನದ ಕಡಲು..!

ಆತ
ಮುಖೇಶ್ ಅಂಬಾನಿಯ ಸಾಮ್ರಾಜ್ಯವನ್ನೇ ತಲ್ಲಣಗೊಳಿಸಿದ.. ನೀತಾ ಅಂಬಾನಿಯ ಹೃದಯವನ್ನೇ ಘಾಸಿಗೊಳಿಸಿ ಕಣ್ಣಲ್ಲಿ ನೀರು ಸುರಿಸಿದ..ಮೈದಾನದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ತಲೆಚಚ್ಚಿಕೊಳ್ಳುವಂತೆ ಮಾಡಿದ.. ಒಂದು ಮಹೋನ್ನತ ಇನಿಂಗ್ಸ್ ಮೂಲಕ ಐದು ಬಾರಿಯ ಚಾಂಪಿಯನ್ ತಂಡಕ್ಕೆ ಮರ್ಮಾಘಾತ ನೀಡಿದ…11 ವರ್ಷಗಳ ಬಳಿಕ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‍ಗೇರಿಸಿದ.. 200 ಪ್ಲಸ್ ರನ್ ಹೊಡೆದು ಗೆಲುವು ನಮ್ಮದೇ ಎಂದು ಬೀಗುತ್ತಿದ್ದ ತಂಡಕ್ಕೆ ಮೊದಲ ಬಾರಿ ಸೋಲಿನ ರುಚಿ ತೋರಿಸಿದ…ಅಷ್ಟೇ ಅಲ್ಲ, ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಕನಸುಗಳನ್ನು ನುಚ್ಚುನೂರುಗೊಳಿಸಿದ.. ಮಂಗಳೂರು ನೀರು ದೋಸೆಯಂತೆ ಸುಯ್ಯನೇ ರನ್ ಹೊಡೆದು ತಂಡವನ್ನು ಗೆಲ್ಲಿಸಿದ.. ಪಾವ್ ಬಾಜಿ ಮುಂದೆ ನೀರುದೋಸೆನೇ ಬೆಸ್ಟ್ ಅಂತ ಸಾಬೀತುಪಡಿಸಿದ…!
ಹೌದು, ಶ್ರೇಯಸ್ ಅಯ್ಯರ್ ನೋಡೋಕೆ ಸೈಲೆಂಟ್ ಕಿಲ್ಲರ್.. ಬ್ಯಾಟಿಂಗ್‍ನಲ್ಲಿ ಕ್ಲಾಸ್ ಆಂಡ್ ಮಾಸ್ ಪ್ಲೇಯರ್… ಕೂಲ್ ಆಗಿಯೇ ಪಂದ್ಯ ಗೆಲ್ಲಬಹುದು ಎಂದು ಅರಿತಿರುವ ಮ್ಯಾಚ್ ವಿನ್ನರ್.. ಅಂದ ಮೇಲೆ ಯಾವುದೇ ಸಂದೇಹವಿಲ್ಲದೇ ಹೇಳಬಹುದು ಶ್ರೇಯಸ್ ಅಯ್ಯರ್ ಈ ಬಾರಿಯ ಐಪಿಎಲ್‍ನ ಸೂಪರ್ ಸ್ಟಾರ್.
saakshatv.com
ಅದಕ್ಕೆ ಕಾರಣವೂ ಇದೆ. 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್‍ಗೇರಿಸಿದ್ರೂ ಮುಂದಿನ ದಿನಗಳಲ್ಲಿ ತಂಡದಿಂದ ಹೊರನಡೆದ. 2024ರಲ್ಲಿ ನಾಯಕನಾಗಿ ಕೆಕೆಆರ್‍ಗೆ ಪ್ರಶಸ್ತಿ ತಂದುಕೊಟ್ರೂ ಅಲ್ಲಿ ಕೂಡ ಬೇಡವಾದ..2025ರಲ್ಲಿ ಅವರನ್ನು ಬಿಟ್ಟು ಇವರು ಅಂತ ಹುಡುಕಾಟದಲ್ಲಿದ್ದ ಪಂಜಾಬ್ ಕಿಂಗ್ಸ್ ತಂಡದ ಕಣ್ಣಿಗೆ ಬಿದ್ದ. ಹಾಗೇ, ಹೆಡ್ ಕೋಚ್ ರಿಕಿ ಪಾಂಟಿಂಗ್, ಅಯ್ಯರ್‍ನ ಸಾಮಥ್ರ್ಯವನ್ನು ಚೆನ್ನಾಗಿ ಅರಿತಿದ್ದ. ಇದೀಗ ನಾಯಕನಾಗಿ ಸತತ ಎರಡನೇ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾನೆ ಶ್ರೇಯಸ್ ಅಯ್ಯರ್.
saakshatv.com
ಅಂದ ಹಾಗೇ, ಶ್ರೇಯಸ್ ಅಯ್ಯರ್ ತನ್ನ ಬ್ಯಾಟ್‍ನಿಂದ ಹಲವರಿಗೆ ಮುಟ್ಟಿನೋಡಿಕೊಳ್ಳುವಂತೆ ಹೊಡೆದ. ಟೆಸ್ಟ್ ಕ್ರಿಕೆಟ್‍ನಲ್ಲಿ ರೂಮ್ ಇಲ್ಲ ಅಂತ ಹೇಳಿದ್ದ ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಜೀತ್ ಅರ್ಗಕರ್‍ನ ಬಾಯಿ ಮುಚ್ಚಿಸಿದ. ತನ್ನನ್ನು ಯಾಕೆ ಆಯ್ಕೆ ಮಾಡಿಲ್ಲ ಅಂತ ಆಯ್ಕೆ ಸಮಿತಿಯನ್ನೇ ಕೇಳಿ ಎಂದು ಹೇಳಿದ್ದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್‍ಗೆ ಮುಖಕ್ಕೆ ಹೊಡೆದಂಗೆ ಆಡಿದ.. ಪಂಜಾಬ್ ಪ್ರಶಸ್ತಿ ಗೆದ್ರೂ ಗೆಲ್ಲದಿದ್ರೂ ರೊಚ್ಚಿಗೆದ್ದ ಅಯ್ಯರ್ ಮಾತ್ರ ಟೀಕೆ ಮಾಡಿದವರಿಗೆ ತಕ್ಕ ಉತ್ತರವನ್ನೇ ನೀಡಿದ.. ನಿರ್ಣಾಯಕ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ಪಂಜಾಬ್ ತಂಡದ ಅದೃಷ್ಟದ ಬಾಗಿಲನ್ನೇ ತೆರೆದ.. ನಗುಮುಖದ ರಾಣಿ ಪ್ರೀತಿ ಝಿಂಟಾಳ ಮುಖದಲ್ಲಿ ಮಂದಹಾಸ ಮೂಡಿಸಿದ.
saakshatv.com
ಪಾಪ ಆ ಸುಂದ್ರಿ ಕಳೆದ 18 ವರ್ಷಗಳಿಂದ ಐಪಿಎಲ್‍ನ ಒಂದೇ ಒಂದು ಪಂದ್ಯವನ್ನು ಮಿಸ್ ಮಾಡಿಕೊಂಡಿಲ್ಲ. ತಂಡ ಸೋಲಲಿ, ಗೆಲ್ಲಲಿ..ಯಾವತ್ತೂ ಬೇಜಾರು ತೋರಿಸಿಕೊಂಡಿಲ್ಲ. ಒಂದು ಬಾರಿ ಪ್ರಶಸ್ತಿ ಹಂತಕ್ಕೆ ಬಂದು ಕೈ ಜಾರಿ ಹೋದ್ರೂ ಕಣ್ಣೀರು ಸುರಿಸಲಿಲ್ಲ.. ನಗುಮುಖದ ಡಿಂಪಲ್ ರಾಣಿಯ ಕ್ರೀಡಾ ಸ್ಪೂರ್ತಿಯ ಮುಂದೆ ಯಾವ ಐಪಿಎಲ್ ಫ್ರಾಂಚೈಸಿ ಮಾಲೀಕರು ಸನೀಹಕ್ಕೂ ಬರಲ್ಲ…ಇದೀಗ 2ನೇ ಬಾರಿ ಪ್ರಶಸ್ತಿ ಹಂತಕ್ಕೆ ತಲುಪಿರುವ ಪಂಜಾಬ್ ತಂಡದ ಹಣೆಬರೆಹ ಏನು ಆಗುತ್ತೆ ಅನ್ನೋದು ಗೊತ್ತಿಲ್ಲ.. ಆದ್ರೆ ಈ ಬಾರಿ ಪ್ರೀತಿ ಝಿಂಟಾ ಖುಷಿಗೆ ಇತಿಮಿತಿಯೇ ಇಲ್ಲ.
ಹಾಗೇ ನೋಡಿದ್ರೆ ಐಪಿಎಲ್‍ನಲ್ಲಿ ಪಂಜಾಬ್ ತಂಡವನ್ನು ಯಾರು ಕೂಡ ಗಂಭೀರವಾಗಿ ಪರಿಗಣಿಸುವುದಿಲ್ಲ. ತಂಡದಲ್ಲಿ ಸ್ಟಾರ್ ಆಟಗಾರರು ಇದ್ರೂ ಲೆಕ್ಕಕ್ಕೆ ಬರುತ್ತಿರಲಿಲ್ಲ. ಪಂಜಾಬ್ ತಂಡ ಅಂದ್ರೆ ಆಟಕ್ಕುಂಟು ಲೆಕ್ಕಕ್ಕಿಲ್ಲ. ಆದ್ರೆ ಈ ಬಾರಿ ಹಾಗೇ ಆಗಲಿಲ್ಲ. ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಸುಮ್ಮನೇ ಕೂರಲಿಲ್ಲ. ತಂಡದಲ್ಲಿ ಸೂಪರ್ ಸ್ಟಾರ್ ಅಂತ ಹೇಳಿಕೊಳ್ಳುವ ಆಟಗಾರರು ಇರಲಿಲ್ಲ. ಆದ್ರೂ ಪಾಂಟಿಂಗ್ ತನ್ನ ಹಠವನ್ನು ಬಿಟ್ಟುಕೊಡಲಿಲ್ಲ. ದೆಹಲಿ ತಂಡದ ಕೋಚ್ ಆಗಿ ಪಾಂಟಿಂಗ್ ಅದ್ಭುತ ಸಾಧನೆ ಏನು ಮಾಡಿರಲಿಲ್ಲ. ಆದ್ರೂ ದೆಹಲಿ ಹಾಗೂ ಕೆಕೆಆರ್ ತಂಡದ ಮಾಜಿ ನಾಯಕನನ್ನೇ ಪಂಜಾಬ್ ತಂಡಕ್ಕೆ ನಾಯಕನಾಗಿ ಆಯ್ಕೆ ಮಾಡುವಲ್ಲಿ ಪಾಂಟಿಂಗ್ ಪಾತ್ರ ಇಲ್ಲ ಎಂದು ಹೇಳುವ ಹಾಗಿಲ್ಲ. ಯಾಕಂದ್ರೆ ಗೇಮ್ ಪ್ಲಾನ್ ವಿಚಾರದಲ್ಲಿ ಪಾಂಟಿಂಗ್ ಪಂಟರ್ ಎಂಬುದು ಕೂಡ ಸುಳ್ಳಲ್ಲ. ಒಂದು ಸಾಮಾನ್ಯ ತಂಡವಾಗಿರುವ ಪಂಜಾಬ್ ತಂಡವನ್ನು ಅಸಾಮಾನ್ಯ ತಂಡವಾಗಿ ರೂಪುಗೊಳಿಸುವಲ್ಲಿ ಪಾಂಟಿಂಗ್ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
saakshatv.com
ಇದೀಗ 2025ರ ಐಪಿಎಲ್ ಫೈನಲ್‍ನಲ್ಲಿ ಎರಡು ನತದೃಷ್ಟ ತಂಡಗಳು ಫೈಟ್ ನಡೆಸಲಿವೆ. ಹಾಗೇ ನೋಡಿದ್ರೆ ಪಂಜಾಬ್‍ಗಿಂತ ಆರ್‍ಸಿಬಿ ಹೆಚ್ಚು ನತದೃಷ್ಟ ತಂಡ. ಈ ಹಿಂದೆ ಮೂರು ಬಾರಿ ಫೈನಲ್‍ಗೆ ಬಂದ್ರೂ ಪ್ರಶಸ್ತಿ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅದು ಅಲ್ಲದೇ ಪ್ರತಿ ಬಾರಿಯೂ ಐಪಿಎಲ್‍ನಲ್ಲಿ ಆರ್‍ಸಿಬಿ ತಂಡ ಗೆಲ್ಲುವ ಫೆವರೀಟ್ ತಂಡವಾಗಿರುತ್ತಿತ್ತು. ಒಂದು ರೀತಿಯಲ್ಲಿ ಆರ್‍ಸಿಬಿ ವಿಶ್ವ ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾಗಿರುವ ಪರಿಸ್ಥಿತಿಯಲ್ಲೇ ಆಡುತ್ತಿತ್ತು. ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ಆರ್‍ಸಿಬಿ ತಂಡಕ್ಕೆ ಎದುರಾಳಿ ತಂಡಕ್ಕಿಂತ ಅಭಿಮಾನಿಗಳ ಒತ್ತಡವೇ ಜಾಸ್ತಿ ಇರುತ್ತಿತ್ತು. ಆದ್ರೆ ಪಂಜಾಬ್ ತಂಡ ಒಂಥರಾ ನ್ಯೂಜಿಲೆಂಡ್ ತಂಡದ ಹಾಗೇ. ಗೆಲ್ಲುವ ಪಂದ್ಯಗಳನ್ನು ಕೈ ಚೆಲ್ಲಿಕೊಳ್ಳುವುದು ಪಂಜಾಬ್ ತಂಡಕ್ಕೆ ಐಪಿಎಲ್‍ನಲ್ಲಿ ಮಾಮೂಲಿಯಾಗಿಬಿಟ್ಟಿತ್ತು. ಆದ್ರೆ ಆಸ್ಟ್ರೇಲಿಯಾ ರೀತಿ ಬಿಗ್ ಮ್ಯಾಚ್ ವಿನ್ನರ್ಸ್ ಖ್ಯಾತಿಯ ಸಿಎಸ್‍ಕೆ ಮಕಾಡೆ ಮಲಗಿದೆ. ಇನ್ನೂ ಪ್ಲೇ ಆಫ್‍ಗೆ ಎಂಟ್ರಿ ಕೊಟ್ಟ ಮೇಲೆ ಪ್ರಶಸ್ತಿ ನಮ್ದೇ ಎಂದು ಬೀಗುತ್ತಿದ್ದ ಮುಂಬೈ ಇಂಡಿಯನ್ಸ್ ತಂಡದ ಅದೃಷ್ಟದ ಲೆಕ್ಕಚಾರವೂ ಬುಡಮೇಲು ಆಗಿದೆ.
ಸದ್ಯ ಎಲ್ಲರ ಚಿತ್ತ ಐಪಿಎಲ್ ಫೈನಲ್‍ನತ್ತ. ಆರ್‍ಸಿಬಿ ಮತ್ತು ಪಿಬಿಕೆಎಸ್ ನಡುವಿನ ರೋಚಕ ಹೋರಾಟ..ಜೂನ್ 3.. ಕಾದು ನೋಡೋಣ..!

Related posts

ದೆಹಲಿಯಲ್ಲಿ ದೋಸ್ತಿ ಕರುನಾಡಿನಲ್ಲಿ ಕುಸ್ತಿ: ಮೈತ್ರಿ ವಿರುದ್ಧ ಸಿಡಿದೆದ್ದ ಕಮಲ ಕಲಿಗಳು

ದೆಹಲಿಯಲ್ಲಿ ದೋಸ್ತಿ ಕರುನಾಡಿನಲ್ಲಿ ಕುಸ್ತಿ: ಮೈತ್ರಿ ವಿರುದ್ಧ ಸಿಡಿದೆದ್ದ ಕಮಲ ಕಲಿಗಳು

February 11, 2026
ರಾಜ್ಯದ ಅಘೋಷಿತ ವರ್ಗಾವಣೆ ಮಂತ್ರಿ ಯತೀಂದ್ರ: ತಂದೆಗೆ ಮುಜುಗರ ತರುತ್ತಿರುವ ಪುತ್ರನ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

ರಾಜ್ಯದ ಅಘೋಷಿತ ವರ್ಗಾವಣೆ ಮಂತ್ರಿ ಯತೀಂದ್ರ: ತಂದೆಗೆ ಮುಜುಗರ ತರುತ್ತಿರುವ ಪುತ್ರನ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

February 11, 2026

ಸನತ್ ರೈ

ಸನತ್ ರೈ

ShareTweetSendShare
Join us on:

Related Posts

ದೆಹಲಿಯಲ್ಲಿ ದೋಸ್ತಿ ಕರುನಾಡಿನಲ್ಲಿ ಕುಸ್ತಿ: ಮೈತ್ರಿ ವಿರುದ್ಧ ಸಿಡಿದೆದ್ದ ಕಮಲ ಕಲಿಗಳು

ದೆಹಲಿಯಲ್ಲಿ ದೋಸ್ತಿ ಕರುನಾಡಿನಲ್ಲಿ ಕುಸ್ತಿ: ಮೈತ್ರಿ ವಿರುದ್ಧ ಸಿಡಿದೆದ್ದ ಕಮಲ ಕಲಿಗಳು

by Shwetha
February 11, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಒಂದಾಗಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ, ಒಗ್ಗಟ್ಟಿನ ಮಂತ್ರಕ್ಕಿಂತ ಭಿನ್ನಮತದ ರಾಗವೇ ಜೋರಾಗಿ ಕೇಳಿಬರುತ್ತಿದೆ. 2028ರ ವಿಧಾನಸಭಾ...

ರಾಜ್ಯದ ಅಘೋಷಿತ ವರ್ಗಾವಣೆ ಮಂತ್ರಿ ಯತೀಂದ್ರ: ತಂದೆಗೆ ಮುಜುಗರ ತರುತ್ತಿರುವ ಪುತ್ರನ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

ರಾಜ್ಯದ ಅಘೋಷಿತ ವರ್ಗಾವಣೆ ಮಂತ್ರಿ ಯತೀಂದ್ರ: ತಂದೆಗೆ ಮುಜುಗರ ತರುತ್ತಿರುವ ಪುತ್ರನ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

by Shwetha
February 11, 2026
0

ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಮೈಸೂರು - ಕೊಡಗು ಮಾಜಿ ಸಂಸದ ಪ್ರತಾಪ್ ಸಿಂಹ ಅವರು...

ರಾಜ್ಯದಲ್ಲಿ 2.85 ಲಕ್ಷ ಹುದ್ದೆ ಖಾಲಿ: ನೇಮಕಾತಿ ಮರೆತು ಕುರ್ಚಿ ಉಳಿಸಿಕೊಳ್ಳುವ ತಂತ್ರಕ್ಕೆ ಮುಂದಾದರಾ ಸಿಎಂ? ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲ

ರಾಜ್ಯದಲ್ಲಿ 2.85 ಲಕ್ಷ ಹುದ್ದೆ ಖಾಲಿ: ನೇಮಕಾತಿ ಮರೆತು ಕುರ್ಚಿ ಉಳಿಸಿಕೊಳ್ಳುವ ತಂತ್ರಕ್ಕೆ ಮುಂದಾದರಾ ಸಿಎಂ? ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲ

by Shwetha
February 11, 2026
0

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಲಕ್ಷಾಂತರ ಯುವಕರು ಕಾಯುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ಮಗ್ನರಾಗಿದ್ದಾರೆ ಎಂಬ ಗಂಭೀರ ಆರೋಪ ರಾಜ್ಯ...

ಕರೆ ಬಂದರೆ ನಾನೂ ದೆಹಲಿಗೆ ಹೋಗುತ್ತೇನೆ: ಸಿಎಂ ಸಿದ್ದರಾಮಯ್ಯ

ಕರೆ ಬಂದರೆ ನಾನೂ ದೆಹಲಿಗೆ ಹೋಗುತ್ತೇನೆ: ಸಿಎಂ ಸಿದ್ದರಾಮಯ್ಯ

by Shwetha
February 11, 2026
0

ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಚರ್ಚೆಗಳು ಜೋರಾಗಿವೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನನಗೆ ಈವರೆಗೆ ಯಾವುದೇ...

ಟ್ರಂಪ್ ಇಬ್ಬಗೆ ನೀತಿಗೆ ಬೆಚ್ಚಿಬಿದ್ದ ಭಾರತ ಬಾಂಗ್ಲಾ ಜವಳಿ ಉತ್ಪನ್ನಕ್ಕೆ ಶೂನ್ಯ ಸುಂಕ ಭಾರತಕ್ಕೆ ಶೇ 18ರಷ್ಟು ತೆರಿಗೆ ಬರೆ

ಟ್ರಂಪ್ ಇಬ್ಬಗೆ ನೀತಿಗೆ ಬೆಚ್ಚಿಬಿದ್ದ ಭಾರತ ಬಾಂಗ್ಲಾ ಜವಳಿ ಉತ್ಪನ್ನಕ್ಕೆ ಶೂನ್ಯ ಸುಂಕ ಭಾರತಕ್ಕೆ ಶೇ 18ರಷ್ಟು ತೆರಿಗೆ ಬರೆ

by Shwetha
February 11, 2026
0

ಭಾರತ ಮತ್ತು ಅಮೆರಿಕ ನಡುವಿನ ಬಹುಚರ್ಚಿತ ವ್ಯಾಪಾರ ಒಪ್ಪಂದ ಇದೀಗ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಒಪ್ಪಂದದ ಆರಂಭದಲ್ಲಿ ಅಮೆರಿಕದ ಸುಂಕವನ್ನು ಶೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram