ವರ್ಷದಿಂದ ಗದ್ದೆಯಲ್ಲಿ ಮನೆ ಮಾಡಿ, ಬೆಚ್ಚಗೆ ಮಲಗಿದ್ದ 14 ಅಡಿ ಉದ್ದದ ಬೃಹತ್ ಕಾಳಿಂಗ ಬಲೆಗೆ ಬಿದ್ದಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ, ಚಿದಂಬರ ಹೆಬ್ಬಾರ್ ಗದ್ದೆಯಲ್ಲಿಯೇ ಈ ಕಾಳಿಂಗ ಸಿಕ್ಕಿದ್ದಾನೆ. ವರ್ಷದಿಂದ ಗದ್ದೆಯನ್ನು ಕೃಷಿ ಮಾಡದೆ ಈ ಪಾಳು ಬಿಟ್ಟಿದ್ದರು. ಆದರೆ, ಈ ಬಾರಿ ಕೃಷಿ ಮಾಡಲು ಮುಂದಾಗಿದ್ದ ಸಂದರ್ಭದಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ. ಕೃಷಿ ಮಾಡುವ ವೇಳೆ ಕಾರ್ಮಿಕರಿಗೆ, ಪದೇ ಪದೇ,ರೌದ್ರಾವತಾರವನ್ನು ಈ ಕಾಳಿಂಗ ಸರ್ಪ ತೋರಿಸಿದೆ.
ಕಾಳಿಂಗ ಸರ್ಪ ಕಾಣಿಸಿಕೊಂಡ ಹಿನ್ನೆಲೆ, ಗದ್ದೆ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕಿದ್ದರು. ಇದು ಬಿಲದಲ್ಲಿ ಮನೆ ಮಾಡಿ ಈ ಕಾಳಿಂಗ ಸರ್ಪ ವಾಸವಾಗಿತ್ತು. ಉರಗ ತಜ್ಞ ಹರಿಂದ್ರ ನಾಲ್ಕು ಗಂಟೆಯ ಕಾರ್ಯಾಚರಣೆಯ ಬಳಿಕ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ.








