ಕಾಣೆಯಾಗಿರುವ ಮಾತು ಬಾರದ ತಾಯಿಗಾಗಿ ಮಗಳು ಹಾಗೂ ಅಳಿಯ ಹಲವಾರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು, ಸದ್ಯ ಹುಡುಕಿ ಕೊಟ್ಟವರಿಗೆ ಭಾರೀ ಬಹುಮಾನ ಘೋಷಿಸಿದ್ದಾರೆ.
ಈ ಘಟನೆ ಕೋಲಾರದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಮಾತು ಬಾರದ ತಾಯಿ ನಾಪತ್ತೆಯಾಗಿದ್ದು, ಕಳೆದ ಏಳು ತಿಂಗಳಿಂದ ಹುಡುಕಾಡುತ್ತಿದ್ದಾರೆ. ತಲೆಗೆ ಪೆಟ್ಟು ಬಿದ್ದು ಬುದ್ದಿಯೂ ಇಲ್ಲ. ಹೀಗಾಗಿ ಏಕಾಏಕಿ ನಾಪತ್ತೆಯಾಗಿದ್ದಾರೆ. ತನ್ನ ತಾಯಿಯನ್ನು ಹುಡುಕಿಕೊಟ್ಟವರಿಗೆ 50 ಸಾವಿರ ಹಣವನ್ನು ಕೊಡುವುದಾಗಿ (reward) ಹೇಳಿದ್ದಾರೆ.
ಕೋಲಾರ ಜಿಲ್ಲೆ ( Kolar) ಮುಳಬಾಗಿಲು ದೋಭಿಘಾಟ್ ಬಳಿಯಲ್ಲಿ ವಾಸವಿದ್ದ 62 ವರ್ಷದ ಲಕ್ಷ್ಮಮ್ಮ ನಾಪತ್ತೆಯಾಗಿದ್ದಾರೆ. ಲಕ್ಷ್ಮಮ್ಮ ಅವರಿಗೆ ಒಬ್ಬಳೇ ಮಗಳು ಪ್ರಮೀಳಾ ಇದ್ದಾರೆ. ಅವರು ಚಿಂತಾಮಣಿ ಮೂಲದ ಲವ ಎಂಬುವವರೊಂದಿಗೆ ಮದುವೆಯಾಗಿದ್ದಾರೆ.
ನಮ್ಮ ಹತ್ತಿರ ಕೊಡುವುದಕ್ಕಾಗಿ ಹಣ ಇಲ್ಲ. ತಿಂಗಳಿಗೆ ಸಾವಿರ ರೂ. ನಂತೆ ಹಣ ನೀಡುತ್ತೇವೆ ಎಂದು ಮಗಳು ತಾಯಿಗಾಗಿ ಮನವಿ ಮಾಡಿದ್ದಾರೆ. ಮಾಹಿತಿ ಸಿಕ್ಕರೆ – ಪ್ರಮೀಳಾ/ ಲವ ಅವರು ತಮ್ಮ 9945035072, 7892898552 ಮೊಬೈಲ್ಗೆ ಸಂಪರ್ಕಿಸಬೇಕಾಗಿ ಕೋರಿದ್ದಾರೆ.