ಪತಿ ಎದುರಲ್ಲೇ ಪತ್ನಿ ಅಕ್ರಮ ಸಂಬಂಧ | ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕೊಂದ
ಹೈದರಾಬಾದ್: ತೆಲಂಗಾಣದ ಹೈದರಾಬಾದ್ನ ರಾಚಕೊಂಡದಲ್ಲಿ ಪತ್ನಿಯ ಅಕ್ರಮ ಸಂಬಂಧ ಕಂಡು ಪತಿ, ಪತ್ನಿಯ ಪ್ರಿಯಕರನನ್ನು ಕೊಲೆ ಮಾಡಿದ್ದಾನೆ.
ಯಶವಂತ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಲ್ಬಿ ನಗರದ ಉಪ ಪೊಲೀಸ್ ಆಯುಕ್ತ ಸನ್ಪ್ರೀತ್ ಸಿಂಗ್ ತಿಳಿಸಿದ್ದಾರೆ.
ನಡೆದಿದ್ದೇನು?: ವಿಜಯವಾಡ ಮೂಲ ನಿವಾಸಿಗಳಾಗಿದ್ದ ಕುಟುಂಬ ಹೈದರಾಬಾದ್ ನಲ್ಲಿ ವಾಸವಾಗಿದ್ದರು.ಈ ವೇಳೆ ತನ್ನ ಪತ್ನಿಗೆ ಯಶವಂತ್ ಪರಿಚಯವಾಗಿ ನಂತರ ಇಬ್ಬರ ನಡುವೆ ಅಕ್ರಮ ಸಂಬಂಧ ಶುರುವಾಗಿತ್ತು. ಇದನ್ನು ತಿಳಿದ ಪತಿ ವಿರೋಧಿಸಿ ತನ್ನ ಪತ್ನಿಗೆ ಅನೇಕ ಬಾರಿ ಬುದ್ಧಿವಾದ ಹೇಳಿದ್ದಾನೆ. ಆದರೆ ಆಕೆ ಪತಿಯನ್ನೇ ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿದ್ದಾಳೆ.
ನಂತರ ಪತಿ ಮತ್ತೆ ವಿಜಯವಾಡಕ್ಕೆ ಹಿಂತಿರುಗುವುದಾಗಿ ಹೆಂಡತಿ ಬಳಿ ಪ್ರಸ್ತಾಪಿಸಿದಾಗ ಆಕೆ ಕೂಡ ಒಪ್ಪಿಕೊಂಡಿದ್ದಳು. ಆದರೆ ಜೊತೆಯಲ್ಲಿ ಯಶವಂತ್ನನ್ನು ಸಹ ತಮ್ಮೊಂದಿಗೆ ಕರೆದುಕೊಂಡು ಹೋಗಬೇಕೆಂದು ಕೇಳಿಕೊಂಡಿದ್ದಳು. ಇದೇ ವೇಳೆ ಆರೋಪಿ ಕೊಲ್ಲಲು ಪ್ಲಾನ್ ಮಾಡಿದ್ದನು.
ನಂತರ ಮೂವರೂ ಎರಡು ವಾಹನಗಳಲ್ಲಿ ಕೊತಗುಡೆಂ ಪಟ್ಟಣವನ್ನು ತಲುಪಿದರು. ಬಳಿಕ ತನ್ನನ್ನು ಮತ್ತು ಯಶವಂತ್ನನ್ನು ಒಬ್ಬಂಟಿಯಾಗಿ ಬಿಡುವಂತೆ ಮಹಿಳೆ ತನ್ನ ಪತಿಯನ್ನು ಕೇಳಿದ್ದಾಳೆ. ಈ ವೇಳೆ ಆರೋಪಿ ಮದ್ಯ ಸೇವಿಸಲು ಪ್ರಾರಂಭಿಸಿದಾಗ, ಆತನ ಹೆಂಡತಿ ಮತ್ತು ಆಕೆಯ ಪ್ರಿಯಕರ ಆರೋಪಿ ಮುಂದೆಯೇ ಲೈಂಗಿಕ ಸಂಭೋಗವನ್ನು ಪ್ರಾರಂಭಿಸಿದ್ದಾರೆ.
ಇದರಿಂದ ಕೋಪಗೊಂಡ ಆರೋಪಿ ಬಂಡೆಕಲ್ಲುಗಳಿಂದ ಇಬ್ಬರಿಗೂ ಹೊಡೆದು ಸ್ಕ್ರೂಡ್ರೈವರ್ನಿಂದ ಇರಿದಿದ್ದಾನೆ. ಇದರಿಂದಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೃತದೇಹಗಳನ್ನು ಜನನಿಬಿಡ ಪ್ರದೇಶದಲ್ಲಿ ಬಿಟ್ಟು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.