ಪತ್ನಿ ನನ್ನೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಪತಿ Saaksha Tv
ಕನಕಪುರ: ಪತ್ನಿ ನನ್ನೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಮಗಳು ಕೂಡ ನನ್ನನ್ನು ಅಪ್ಪ ಎಂದು ಕರೆಯುತ್ತಿಲ್ಲ ಎಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನಪುರದಲ್ಲಿ ನಡೆದಿದೆ.
55 ವರ್ಷದ ಈಶ್ವರಪ್ಪ ಸಾವನ್ನಪ್ಪಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಆರ್ಟ್ ಆಫ್ ಲಿವಿಂಗ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಪತ್ನಿ ನನ್ನ ಜೊತೆ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಮಗಳಿಗೂ ನನ್ನ ಮೇಲೆ ಪ್ರೀತಿ ಇರಲಿಲ್ಲ. ಅವಳು ನನ್ನನ್ನು ಅಪ್ಪ ಎಂದು ಕರೆಯುತ್ತಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಲ್ಲದೇ ನನ್ನ ಪತ್ನಿ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸದ್ದರು. ಆಗ ಜಯನಗರ ಪೊಲೀಸ ಠಾಣೆ ಎಸಿಪಿ ಸರಿಯಾಗಿ ವಿಚಾರಣೆ ನಡೆಸದೆ, ನನ್ನನ್ನು ಠಾಣೆಗೆ ಕರೆಯಿಸಿದ್ದರು. ಹೀಗಾಗಿಯೇ ನಾನು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಡೆತ್ ನೋಟ್ ಬರೆದಿದ್ದಾರೆ.
ಹಾಗೇ ಇವರು ಡೆತ್ ನೋಟ್ ನಲ್ಲಿ ಪತ್ನಿ, ಸ್ನೇಹಿತರು, ಜಯನಗರ ಎಸಿಪಿ ಸೇರಿದಂತೆ 12 ಜನರ ಹೆಸರನ್ನು ಬರೆದಿದ್ದಾರೆ. ಮೃತ ಈಶ್ವರ್ ಅವರ ಸಹೋದರ ಈ ಕುರಿತು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ನನ್ನ ಸಹೋದರನ ಸಾವಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.