ವಿಚ್ಛೇಧನ ಕೋರಿದ್ದಕ್ಕೆ ಜನಜಂಗುಳಿ ಮಧ್ಯೆಯೇ ಹೆಂಡತಿ ಕೊಲೆ…
ವಿಚ್ಚೇಧನ ಕೋರಿದ್ದ ಹೆಂಡತಿಯನ್ನ ಹಾಡಹಗಲೇ, ಜನಜಂಗುಳಿಯ ನಡುವೆಯ ಮಾರಕಾಸ್ತ್ರಗಳಿಂದ ಕೊಚ್ಚಿ ಪತ್ನಿಯನ್ನು ಪತಿಯೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕೋಟೆ ಕೆರೆ ಬಳಿ ನಡೆದಿದೆ.
24 ವರ್ಷದ ಹೀನಾ ಕೌಸರ್ ಕೊಲೆಯಾದ ದುರ್ದೈವಿ. 4 ವರ್ಷಗಳ ಹಿಂದೆ 34 ವರ್ಷದ ಮಂಜೂರ್ ಜೊತೆ ಹೀನಾ ಕೌಸರ್ ವಿವಾಹವಾಗಿದ್ದರು. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 8 ತಿಂಗಳ ಹಿಂದ ಡಿವೋರ್ಸ್ ಪಡೆದುಕೊಳ್ಳಲು ಹೀನಾ ಕೌಸರ್ ಅರ್ಜಿ ಸಲ್ಲಿಸಿದ್ದರು. ಆದರೆ ವಿಚ್ಛೇದನ ನೀಡದಂತೆ ಮಂಜೂರ್ ಇಲಾಹಿ ಕೇಳಿಕೊಂಡಿದ್ದ. ಇದನ್ನ ತಿರಸ್ಕರಿಸಿದ್ದಕ್ಕೆ ಜನನಿಬಿಡ ಪ್ರದೇಶದಲ್ಲೇ ಹೆಂಡತಿಯನ್ನು ಹತ್ಯೆ ಮಾಡಿದ್ದಾನೆ.
ಕೋರ್ಟ್‌ನಿಂದ ವಾಪಸಾಗುತ್ತಿದ್ದಾಗ ಮಾರಕಾಸ್ತ್ರಗಳಿಂದ ಹೀನಾ ಕೌಸರ್ ಮೇಲೆ ಪತಿ ಮಂಜೂರ್ ಇಲಾಹಿ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಕೌಸರ್ ಬಿಮ್ಸ್ ಅವರನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಮತ್ತು ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸದ್ಯ ಆರೋಪಿ ಪತಿ ಮಂಜೂರ್ ಇಲಾಹಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.