ರಾಯ್ಪುರ: ರಸ್ತೆ ಹಗರಣದ ಬಗ್ಗೆ ವರದಿ ಮಾಡಿದ್ದ ಪತ್ರಕರ್ತನ ಶವ ಗುತ್ತಿಗೆದಾರನ ಮನೆಯ ಹತ್ತಿರ ಪತ್ತೆಯಾಗಿರುವ ಘಟನೆ ನಡೆದಿದೆ.
ಈ ಘಟನೆ ಛತ್ತೀಸಗಢದಲ್ಲಿ (Chattisgarh) ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮುಕೇಶ್ ಚಂದ್ರಾಕರ್ (Mukesh Chandrakar) ಕೊಲೆಯಾಗಿರುವ ಪತ್ರಕರ್ತ. ಛತ್ತೀಸ್ಗಢದ ಬಸ್ತಾರ್ ವಿಭಾಗದಲ್ಲಿ ಗುತ್ತಿಗೆದಾರರ ಒಡೆತನದ ಶೆಡ್ನಲ್ಲಿನ ಸೆಪ್ಟಿಕ್ ಟ್ಯಾಂಕ್ನಲ್ಲಿ ಶವ ಪತ್ತೆಯಾಗಿದೆ. ಕೊಲೆಯಾಗಿರುವ ಪತ್ರಕರ್ತ ಗುತ್ತಿಗೆದಾರರೊಬ್ಬರ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ್ದರು ಎನ್ನಲಾಗಿದೆ.
ಪತ್ರಕರ್ತನ ಸಹೋದರ ಯುಕೇಶ್ ಕಾಣೆಯಾದ ದೂರನ್ನು ದಾಖಲಿಸಿದ್ದರು. ತನಿಖೆಯನ್ನು ಪ್ರಾರಂಭಿಸಿದ ನಂತರ, ಪೊಲೀಸರು 32 ವರ್ಷದ ವ್ಯಕ್ತಿಯ ಶವ ಪತ್ತೆ ಹಚ್ಚಿದ್ದಾರೆ. ಮುಕೇಶ್ ಅವರ ಸೋದರ ಸಂಬಂಧಿ ರಿತೇಶ್ ಚಂದ್ರಾಕರ್ನನ್ನು ಶನಿವಾರ ರಾಯ್ಪುರ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದ್ದು, ಮೇಲ್ವಿಚಾರಕ ಮಹೇಂದ್ರ ರಾಮ್ಟೆಕೆ ಮತ್ತು ಮುಕೇಶ್ ಅವರ ಇನ್ನೊಬ್ಬ ಸಂಬಂಧಿ ದಿನೇಶ್ ಚಂದ್ರಾಕರ್ನನ್ನು ಬಿಜಾಪುರದಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಗುತ್ತಿಗೆದಾರ ಸುರೇಶ್ ಚಂದ್ರಾಕರ್ ಪರಾರಿಯಾಗಿದ್ದಾನೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾ
“ಮುಸಲ್ಮಾನರಿಗೆ ಏನಾದರೂ ಆಗಿದ್ದರೆ ಸಿದ್ದರಾಮಯ್ಯನವರು ಪಂಚೆ ಎತ್ತಿಕೊಂಡು ಬರುತ್ತಿದ್ದರು” ಆರ್.ಅಶೋಕ್ ಟೀಕೆ
ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರದ ತುಷ್ಟೀಕರಣವೇ ಕಾರಣ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ವಿಜಯೇಂದ್ರ ಅವರು ಖಂಡನೆ...