ಉಡುಪಿ: ಶಿಕ್ಷಕಿಯೊಬ್ಬರು ಮಹಿಳೆಯೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ.
ಉಡುಪಿಯ (Udupi) ಕುಂದಾಪುರದಲ್ಲಿ ಈ ಘಟನೆ ನಡೆದಿದೆ.
ಕುಂದಾಪುರ (Kundapura) ತಾಲೂಕಿನ ಕೊಟೇಶ್ವರದ ಅರ್ಚನಾ ಕಾಮತ್ (34) (Archana Kamath) ಸಾವನ್ನಪ್ಪಿರುವ ದುರ್ದೈವಿ. ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 69 ವರ್ಷದ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಇವರು ಮುಂದಾಗಿದ್ದರು. ಹೀಗಾಗಿ ಯಕೃತ್ ದಾನ ಮಾಡಲು ಮಂಗಳೂರಿನ ಆಸ್ಪತ್ರೆಗೆ ಅರ್ಚನಾ ದಾಖಲಾಗಿದ್ದರು. ಆದರೆ, ಸೋಂಕಿಗೆ ಬಲಿಯಾಗಿ ತಾವೇ ಜೀವ ಕಳೆದುಕೊಂಡಿದ್ದಾರೆ.
ಸದಾ ಸಮಾಜಮುಖಿ ಚಿಂತನೆಯೊಂದಿಗೆ ಅರ್ಚನಾ ಕಾಮತ್ ಸಕ್ರಿಯವಾಗಿದ್ದರು. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು ಹಾಗೂ ತಂದೆ-ತಾಯಿ ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಉಪನ್ಯಾಸಕಿಯ ಕಾರ್ಯಕ್ಕೆ ಜನ ಕಂಬನಿ ಮಿಡಿಯುತ್ತಿದ್ದಾರೆ.