ಧಾರವಾಡ: ಚಿರತೆ ದಾಳಿ ಎಂಬುವುದು ಈಗ ರಾಜ್ಯದಲ್ಲಿ ಸರ್ವೇ ಸಾಮಾನ್ಯವಾದಂತಾಗುತ್ತಿದೆ. ಹೀಗಾಗಿ ಯಾವ ಊರಲ್ಲಿ ಕಾಡು ಪ್ರಾಣಿಗಳು ದಾಳಿ ಮಾಡುತ್ತವೆ ಎಂಬುವುದೇ ತಿಳಿಯದಂತಾಗಿದೆ. ತಾಲ್ಲೂಕಿನ ಮನಸೂರಿನ ಕರಿಯಮ್ಮ ಗುಡಿ ಹತ್ತಿರದ ಕೊಟ್ಟಿಗೆಗೆ ಚಿರತೆ ನುಗ್ಗಿ ಹಸು ಕರುವನ್ನು ಕೊಂದಿದೆ.
ಹೀಗಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕರ್ನಾಟಕ ವಿಶ್ವವಿದ್ಯಾಲಯ ಪಕ್ಕದ ಶಾಂಭವಿ ನಗರದಲ್ಲಿ ಸ್ಥಳೀಯರೊಬ್ಬರಿಗೆ ಚಿರತೆ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಆತಂಕದಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ.
ವಿಶ್ವವಿದ್ಯಾನಿಲಯದ ಹತ್ತಿರ ಕಾಣಿಸಿಕೊಂಡಿದ್ದ ಚಿರತೆ ಗುಡ್ಡಗಾಡು ಪ್ರದೇಶವಾದ ಮನ್ಸೂರ್ ಗ್ರಾಮದ ಕಡೆಗೆ ತೆರಳಿರಬಹುದು ಎಂದು ಅರಣ್ಯಾಧಿಕಾರಿ ಶಂಕಿಸಿದ್ದಾರೆ. ಚಿರತೆ ಹಳಿಯಾಳ ಅರಣ್ಯದಿಂದ ಆಹಾರ ಹಾಗೂ ನೀರು ಹುಡುಕಿಕೊಂಡು ಬಂದಿರಬಹುದು ಎಂದು ಹೇಳಿದ್ದಾರೆ.
ಈಗ ಕರು ಕಳೆದುಕೊಂಡ ರೈತನಿಂದ ನಮಗೆ ದೂರು ಬಂದಿದ್ದು, ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದೆ.