ಭೋಪಾಲ್ : ಮಧ್ಯಪ್ರದೇಶದ ಸಿಂಗರೌಲಿಯ ಬಸೌಡಾ ಗ್ರಾಮದಲ್ಲಿ ವ್ಯಕ್ತಿಯೋರ್ವ ಮೂಢನಂಭಿಕೆಯಿಂದ ಹೆಂಡತಿಯ ಕೊತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಕುಲದೇವತಿಯ ಪ್ರಸನ್ನಗೊಳಿಸಲು ಪತ್ನಿಯ ಕುತ್ತಿಗೆ ಕೊಯ್ದಿರುವುದಾಗಿ ಹೇಳಿಕೊಂಡಿದ್ದಾನೆ. ಬಿಟ್ಟಿದೇವಿ ಕೊಲೆಯಾದವರಾಗಿದ್ದು, ಬ್ರಿಜೇಶ್ ಕೆವಟ್ ಕೊಲೆ ಮಾಡಿದವನಾಗಿದ್ದಾನೆ.
ಅಪ್ಪನ ಈ ಕ್ರೂರ ಕೃತ್ಯಕ್ಕೆ ಮಗನೇ ಸಾಕ್ಷಿಯಾಗಿದ್ದು, ಪೊಲೀಸರ ಮುಂದೆ ಘಟನೆ ಬಗ್ಗೆ ಎಲ್ಲ ಮಾಹಿತಿಯನ್ನ ನೀಡಿದ್ದಾರೆ. ರಾತ್ರಿ ಅಪ್ಪ ಅಮ್ಮ ಕುಲದೇವತೆಗೆ ಪೂಜೆ ಸಲ್ಲಿಸಿದ ಬಳಿಕ ಎಲ್ಲರು ಮಲಗಿದೆವು. ತಡರಾತ್ರಿ ಒಳಗೆ ಅಪ್ಪ-ಅಮ್ಮ ಜಗಳ ಆಡುತ್ತಿರುವ ಧ್ವನಿ ಕೇಳಿಸಿತು. ಆಗ ನಾನು ಅಪ್ಪನನ್ನ ತಡೆಯಲು ಹೋದಾಗ, ನೀವು ಮಧ್ಯ ಬರಬೇಡ ಅಂತಾ ನನ್ನನ್ನು ಹೊರಗೆ ಕಳಿಸಿದರು. ಕೆಲ ಸಮಯದ ಬಳಿಕ ಅಮ್ಮನ ಧ್ವನಿ ಕೇಳಿಸಲಿಲ್ಲ. ಆಗ ತಂದೆ ಅಮ್ಮನನ್ನ ಕೊಂದು ಶವದ ಜೊತೆ ಹೊರ ಬಂದ್ರು. ತದನಂತರ ರುಂಡ ಮತ್ತು ಶವವನ್ನ ಹೂತರು ಎಂದು ಬಿಟ್ಟಿದೇವಿ ಪುತ್ರ ಹೇಳಿದ್ದಾನೆ.
ಗಲಾಟೆಯ ಶಬ್ಧ ಕೇಳಿ ಬಂದನೆರೆಹೊರೆಯವರು ಘಟನೆಯನ್ನು ಕಂಡು ಒಂದು ಕ್ಷಣ ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಫೋನ್ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಬ್ರಿಜೇಶ್ ನನ್ನು ವಶಕ್ಕೆ ಪಡೆದಿದ್ದಾರೆ.







