ನವದೆಹಲಿ: ದೇಶದಲ್ಲಿ ಮಳೆಗಾಲ ಆರಂಭವಾದರೂ ಬಿಸಿಲಿನ ತಾಪಮಾನ ಮಾತ್ರ ಕಡಿಮೆಯಾಗುತ್ತಿಲ್ಲ. ಹಲವು ರಾಜ್ಯಗಳಲ್ಲಿನ ಜನರು ಬಿಸಿಲಿಗೆ ಇನ್ನೂ ಬಸವಳಿದಿದ್ದಾರೆ. ಬಿಹಾರ ಮೂಲದ (Bihar Man) ವ್ಯಕ್ತಿಯೊಬ್ಬರು ಹೀಟ್ ಸ್ಟ್ರೋಕ್ ನಿಂದ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಈ ವ್ಯಕ್ತಿ ಕೂಲರ್ ಅಥವಾ ಫ್ಯಾನ್ ಇಲ್ಲದ ಕೋಣೆಯಲ್ಲಿ ಇರುತ್ತಿದ್ದರು. ಹೀಗಾಗಿ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ದೇಹದ ಉಷ್ಣಾಂಶವು 107 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು. ಸಾಮಾನ್ಯಕ್ಕಿಂತ ಸುಮಾರು 10 ಡಿಗ್ರಿ ಹೆಚ್ಚಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ದೆಹಲಿಯಲ್ಲಿ ಕೂಡ ಶಾಖದ ಅಲೆ ಜೋರಾಗಿದೆ. ನಗರದ ಹೊರವಲಯದಲ್ಲಿನ ಮುಂಗೇಶ್ ಪುರ ಹವಾಮಾನ ಕೇಂದ್ರವು 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ. ದೆಹಲಿ ನಗರದಾದ್ಯಂತ ಸರಾಸರಿ 45-50% ಸೆಲ್ಸಿಯಸ್ ವ್ಯಾಪ್ತಿಯಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಅಲ್ಲಿಯ ಜನ ತೀವ್ರ ತರವಾದ ತೊಂದರೆ ಅನುಭವಿಸುವಂತಾಗಿದೆ.