ಕೀಚಕನ ಅಟ್ಟಹಾಸಕ್ಕೆ ಬಾಲಕಿ ಸಾವು : ಸುದ್ದಿ ತಿಳಿದು ತಂದೆ ಆತ್ಮಹತ್ಯೆ

1 min read
Rape

ಕೀಚಕನ ಅಟ್ಟಹಾಸಕ್ಕೆ ಬಾಲಕಿ ಸಾವು : ಸುದ್ದಿ ತಿಳಿದು ತಂದೆ ಆತ್ಮಹತ್ಯೆ

ನವದೆಹಲಿ: 4 ವರ್ಷದ ಬಾಲಕಿಯ ಮೇಲೆ ಅತ್ಯಚಾರಕ್ಕೆ ಯತ್ನಿಸಿರುವ ಕಾಮುಕನೊಬ್ಬ ಆಕೆ ಕಿರುಚಾಡಿದಕ್ಕೆ ಕತ್ತು ಸೀಳಿ ಕೊಂದು ದೇಹವನ್ನು ಚೀಲದಲ್ಲಿ ಕಟ್ಟಿ ಬಾತ್ ರೂಮ್ ನ ಕಿಟಕಿಯಿಂದ ಹೊರಗೆ ಎಸೆದಿದ್ದಾನೆ.

ಇಂತಹದೊಂದು ಹೇಯ ಕೃತ್ಯ ಬೆಳಕಿಗೆ ಬಂದಿರುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ.

ಇನ್ನೂ ವಿಪರ್ಯಾಸ ಎಂದ್ರೆ ಮಗಳು ಸತ್ತ ವಿಚಾರ ತಿಳಿಯುತ್ತಿದ್ದಂತೆ ಆಕೆಯ ತಂದೆಯೂ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ.

ಪ್ರಕರಣ ಸಂಬಂಧ 30 ವರ್ಷದ ರಜತ್ ಆರೋಪಿಯಾಗಿದ್ದು, ಈತನನ್ನ ಪೊಲೀಸರು ಬಂಧಿಸಿದ್ದಾರೆ.

rape

ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಈತ ಬಾಲಕಿಯನ್ನು ಪುಸಲಾಯಿಸಿ ಅಪಾರ್ಟ್ಮೆಂಟ್ಗೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿ ಆತ್ಯಾಚಾರ ಮಾಡಲು ಪ್ರಯತ್ನಿಸಿದ್ದಾನೆ. ಬಾಲಕಿ ಜೋರಾಗಿ ಅತ್ತಿದ್ದರಿಂದ ಕೊಲೆ ಮಾಡಿದ್ದಾನೆ.

ನಂತರ ಆಕೆಯ ದೇವಹನ್ನು ಚೀಲದಲ್ಲಿ ಕಟ್ಟಿ ಬಾತ್ರೂಮ್ ಕಿಟಕಿ ಒಡೆದು ಹೊರಗೆ ಎಸೆದಿದ್ದಾನೆ.

ಬಾಲಕಿ ಕಾಣದೆ ಇದ್ದಾಗ ಆಕೆಯ ಪೋಷಕರು ಹುಡುಕಿದ್ದಾರೆ. ನಂತರ ನಾಪತ್ತೆ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

ತನಿಖೆ ಆರಂಭಿಸಿದ ಪೊಲೀಸರು ಫ್ಲ್ಯಾಟ್ಗಳಲ್ಲಿ ಹುಡುಕಾಟ ನಡೆಸಿದಾಗ ಆರೋಪಿ ಮನೆಯಲ್ಲಿ ರಕ್ತದ ಕಲೆಗಳು ಇರುವುದು ಪತ್ತೆಯಾಗಿದೆ. ನಂತರ ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾನೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd