ರಾಯಚೂರು: ವ್ಯಕ್ತಿಯೊಬ್ಬ ರಾತ್ರಿ ವೇಳೆ ಮಲಗಿದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ತಾಲ್ಲೂಕಿನ ಸಿಂಗನೋಡಿ ತಾಂಡಾದಲ್ಲಿ ನಡೆದಿದೆ. ಟಿ.ಎ.ರಾಜು ನಾಯ್ಕ್ ಎಂಬ ವ್ಯಕ್ತಿಯೇ ಈ ರೀತಿ ಸಾವನ್ನಪ್ಪಿದ್ದಾನೆ. ಸದ್ಯ ಈ ಸಾವಿನ ಕುರಿತು ಕುಟುಂಬಸ್ಥರ ಅನುಮಾನ ವ್ಯಕ್ತಪಡಿಸಿದ್ದಾರೆ. ರಾಯಚೂರು ತಾಪಂನ ಮಾಜಿ ಸದಸ್ಯ ಹಾಗೂ ಸಿಂಗನೋಡಿ ಪಂಚಾಯಿತಿ ಹಾಲಿ ಸದಸ್ಯನಾಗಿದ್ದ ಟಿ.ಎ ರಾಜು ತುಂಬಾ ಒಳ್ಳೆಯ ಮನುಷ್ಯ. ಈ ವ್ಯಕ್ತಿ ಹೀಗೆ ಸಾವನ್ನಪ್ಪಿದ್ದಾನೆ ಎಂದರೆ ನಂಬಲು ಆಗುತ್ತಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಯಾಪಲದಿನ್ನಿ ಪೊಲೀಸರು, ಮೃತನ ಪತ್ನಿ ಸ್ನೇಹಾ ಅನೈತಿಕ ಸಂಬಂಧ ಹೊಂದಿದಳು. ಹೀಗಾಗಿ ಕೊಲೆ ಮಾಡಿದ್ದಾಳೆ ಎನ್ನಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಸಿಂಗನೋಡಿ ತಾಂಡಾದಲ್ಲಿ ದೇವಸ್ಥಾನವೊಂದರ ಕಾಮಗಾರಿ ನಡೆಯುತ್ತಿತ್ತು. ಆಗ ಮಹಾರಾಷ್ಟ್ರ ಮೂಲದ ರಾಜು ಎನ್ನುವ ವ್ಯಕ್ತಿ ಸೇರಿ ನಾಲ್ಕೈದು ಜನ ಕೆಲಸಕ್ಕೆ ಬಂದಿದ್ದರು. ಈ ವೇಳೆ ರಾಜು ಎಂಬಾತನೊಂದಿಗೆ ಪತ್ನಿ ಸಂಬಧ ಬೆಳೆಸಿದ್ದಳು ಎನ್ನಲಾಗಿದೆ. ಇದು ಊರಲ್ಲಿ ಗೊತ್ತಾಗುತ್ತಿದ್ದಂತೆ ಆತನನ್ನು ಊರು ಬಿಡಿಸಿದ್ದರು. ಆದರೂ ಇಬ್ಬರೂ ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ಎಂದಿನಂತೆ ಮನೆಯಲ್ಲಿ ಮದ್ಯಪಾನ ಮಾಡೋವಾಗ ಆತನಿಗೆ ಪತ್ನಿ ಸ್ನೇಹಾ ಹೆಚ್ಚು ಕುಡಿಸಿದ್ದಾಳೆ. ನಂತರ ರಾತ್ರಿ ಮಲಗಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಸದ್ಯ ಪೊಲೀಸರು ಪತ್ನಿ ಸ್ನೇಹಾಳನ್ನ ವಶಕ್ಕೆ ಪಡೆದಿದ್ದಾರೆ. ಮಕ್ಕಳು ಅನಾಥರಾಗಿದ್ದಾರೆ.