ದಾವಣಗೆರೆ: ವ್ಯಕ್ತಿಯೊಬ್ಬ ಎರಡನೇ ಪತ್ನಿಗಾಗಿ ಮೊದಲ ಹೆಂಡತಿಯನ್ನು ಕೆರೆಗೆ ಹಾಕಿದ ಘಟನೆ ತಾಲ್ಲೂಕಿನ ಕೊಡಗನೂರು ಕೆರೆಯಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಾಸಲುಹಳ್ಳ ಗ್ರಾಮದ ಕಾವ್ಯ ಕೊಲೆಯಾಗಿರುವ ದುರ್ದೈವಿ. ಇವರನ್ನು ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ ಎಂಬಾತನನ್ನು ಕಳೆದ ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಒಂದು ಮಗು ಕೂಡ ಈ ದಂಪತಿಗೆ ಇತ್ತು.
ಆದರೆ, ಸಚಿನ್ ಗೆ ಬೇರೆ ಮಹಿಳೆಯರ ಚಪಲ ಇತ್ತು. ಆತ ಚೈತ್ರ ಎಂಬ ಮಹಿಳೆಯ ಹಿಂದೆ ಬಿದ್ದಿದ್ದರು. ಇವರಿಬ್ಬರ ಸಂಬಂಧಕ್ಕೆ ಕಾವ್ಯ ಅಡ್ಡಿಯಾಗಿದ್ದಾರೆಂದು ಕತ್ತು ಹಿಸುಕಿ ಕೊಲೆ ಮಾಡಿ ಗೋಣಿಚೀಲದಲ್ಲಿ ತುಂಬಿಕೊಂಡು ಕೆರೆಗೆ ಎಸೆದಿದ್ದಾರೆ ಎನ್ನಲಾಗಿದೆ.