ಔಷಧಿ ಪಡೆಯುವುದಕ್ಕಾಗಿ ಮೆಡಿಕಲ್ ಶಾಪ್ ಗೆ ಬಂದ ವ್ಯಕ್ತಿಯೊಬ್ಬರು ಮೆಡಿಕಲ್ ಶಾಪ್ ಬಾಗಿಲಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ಮೈಸೂರು ನಗರದ ಕ್ಯಾತಾಮರನಹಳ್ಳಿ ಮೆಡಿಕಲ್ ಶಾಪ್ ಹತ್ತಿರ ನಡೆದಿದೆ.
ಈ ದೃಶ್ಯ ಮೆಡಿಕಲ್ ಶಾಪ್ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೊಬ್ಬರು ಎದೆ ಉಜ್ಜುತ್ತಾ ಮೆಡಿಕಲ್ ಶಾಪ್ ಗೆ ಬಂದು ಔಷಧ ಕೇಳುತ್ತಿದ್ದರು. ಅಂಗಡಿ ಹತ್ತಿರ ನಿಂತ ಸ್ವಲ್ಪ ಹೊತ್ತಿನಲ್ಲಿಯೇ ಕುಸಿದು ಬಿದ್ದಿದ್ದಾರೆ. ಅಂಗಡಿಯವರು ಓಡಿ ಹೋಗಿ ವಿಚಾರಿಸುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
ನಗರದ ಕ್ಯಾತಮರನಹಳ್ಳಿಯ ಮೆಡಿಕಲ್ ಶಾಪ್ ಗೆ ಔಷಧ ತೆಗೆದುಕೊಳ್ಳಲು ಬಂದ ಜದಗೀಶ್ ಹೃದಯಾಘಾತದಿಂದ ಮೆಡಿಕಲ್ ಶಾಪ್ ಕೌಂಟರ್ ಎದುರೇ ಹೀಗೆ ಕುಸಿದು ಬಿದ್ದು ಸಾವನ್ನಪ್ಪಿರುವ ದುರ್ದೈವಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಎದೆ ನೋವು ಕಾಣಿಸಕೊಂಡ ಹಿನ್ನೆಲೆಯಲ್ಲಿ ಔಷಧ ತೆಗೆದುಕೊಳ್ಳಲು ಮೆಡಿಕಲ್ ಶಾಪ್ ಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಜಗದೀಶ ಅವರು ಕ್ಯಾತಾಮರನಹಳ್ಳಿಯಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,