ಮುಂಬೈ: ಪುರುಷನೊಬ್ಬ ಬರೋಬ್ಬರಿ 36 ವರ್ಷಗಳ ಕಾಲ ಗರ್ಭ ಧರಿಸಿದ್ದ ಪ್ರಕರಣವೊಂದು ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸಿದೆ.
ನಾಗ್ಪುರದ (Nagpur) 60 ವರ್ಷದ ವ್ಯಕ್ತಿಯೊಬ್ಬ ಕಳೆದ ಮೂರು ದಶಕಗಳ ಕಾಲ ತನ್ನದೇ ಟ್ವಿನ್ಸ್ ನ ನಿರ್ಜೀವ ಅಂಗಾಂಗಳನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಜೀವನ ಸಾಗಿಸಿದ್ದಾರೆ. ಇವರ ಹೊಟ್ಟೆ ಕಂಡು ಪ್ರತಿಯೊಬ್ಬರೂ ಗೇಲಿ ಮಾಡುತ್ತಿದ್ದರು. ಆದರೆ, ಇವರು ಮಾತ್ರ ಯಾವುದನ್ನು ತಲೆಗೆ ಹಚ್ಚಿಕೊಳ್ಳದೆ ಜೀವನ ಸಾಗಿಸುತ್ತಿದ್ದರು. ಹಲವರಂತೂ ಗರ್ಭಿಣಿ ಎಂದೇ ಗೇಲಿ ಮಾಡುತ್ತಿದ್ದರು. ಆದರೆ, ವಿಪರ್ಯಾಸ ಎಂದರೆ 3 ದಶಕಗಳ ಕಾಲ ಇವರು ಗರ್ಭಿಣಿಯಾಗಿಯೇ ಇದ್ದರು. ದಿ ಡೈಲಿ ಸ್ಟಾರ್ ವರದಿಯಂತೆ, ಭಗತ್ ಗೆ 1999ರಲ್ಲಿ ಹೊಟ್ಟೆಯ ಭಾರೀ ಉಬ್ಬಿನಿಂದಾಗಿ ಉಸಿರಾಡುವುದು ಕಷ್ಟವಾಗಿತ್ತು. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ನೀಡಿದ ವೈದ್ಯರಿಗೆ ದೊಡ್ಡ ಅಚ್ಚರಿಯೇ ಕಾದಿತ್ತು. ಭಗತ್‌ನ ವೈದ್ಯಕೀಯ ಸ್ಥಿತಿ ಅಪರೂಪದಲ್ಲೇ ಅಪರೂಪವಾಗಿತ್ತು.
ಪರೀಕ್ಷೆ ನಡೆಸಿದ್ದ ದ ಡಾ. ಅಜಯ್ ಮೆಹ್ತಾ, ತನ ಹೊಟ್ಟೆಯಲ್ಲಿ ದೊಡ್ಡ ಗಡ್ಡೆ ಇರುವುದನ್ನು ಗಮನಿಸಿದ್ದಾರೆ. ನಂತರ ಆತನ ಹೊಟ್ಟೆಯನ್ನು ಸೀಳಿ ನೋಡಿದಾಗ ಇದೊಂದು ಕ್ಯಾನ್ಸರ್‌ನ ಗಡ್ಡೆ ಎಂದು ಭಾವಿಸಲಾಗಿತ್ತು. ಮತ್ತಷ್ಟು ವಿಚಾರ ಹೊರತೆಗೆಯಲು ಯತ್ನಿಸಿದಾಗ ಹೊಟ್ಟೆಯಲ್ಲಿ ಅಂಗಂಗಳು ಪತ್ತೆಯಾಗಿವೆ. ಜನನಾಂಗದ ಕೆಲವು ಭಾಗಗಳು, ಕೂದಲು, ದವಡೆ, ಕೈ-ಕಾಲುಗಳು ಕಂಡು ಬಂದಿವೆ. ಭಗತ್ ನ ಹೊಟ್ಟೆಯೊಳಗೆ ಅವಳಿ ಬೆಳೆದಿದೆ. ಆದರೆ ಇದು ಮಾತ್ರ ಅವರ ಗಮನಕ್ಕೆ ಬಂದಿಲ್ಲ.








