ಹೊಸ ವರ್ಷದ ಮೊದಲ ದಿನವೇ ಭಾರಿ ಭೂಕುಸಿತ; 12 ವಾಹನಗಳು ನೆಲಸಮ 15 ಜನ ನಾಪತ್ತೆ
1 min read
ಹೊಸ ವರ್ಷದ ಮೊದಲ ದಿನವೇ ಭಾರಿ ಭೂಕುಸಿತ; 12 ವಾಹನಗಳು ನೆಲಸಮ 15 ಜನ ನಾಪತ್ತೆ
ಹರಿಯಾಣದ ಭಿವಾನಿ ಜಿಲ್ಲೆಯ ಗಣಿಗಾರಿಕೆ ವಲಯದಲ್ಲಿ ಘಟನೆ
10ರಿಂದ 15 ಜನರು ಮಣ್ಣಿನಡಿ ಹೂತುಹೋಗಿದ್ದಾರೆ.
ತೋಷಮ್ ಬ್ಲಾಕ್‌ನ ದಡಮ್ ಗಣಿಗಾರಿಕೆ ವಲಯದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ
ಹೊಸ ವರ್ಷದ ಮೊದಲ ದಿನವೇ ಹರಿಯಾಣದ ಭಿವಾನಿ ಜಿಲ್ಲೆಯ ಗಣಿಗಾರಿಕೆ ವಲಯದಲ್ಲಿ ಭೂಕುಸಿತ ಸಂಭವಿಸಿದೆ.
12ಕ್ಕೂ ಹೆಚ್ಚು ವಾಹನಗಳು ಹೂತು ಹೋಗಿವೆ. .
ಗಣಿಗಾರಿಕೆಯಲ್ಲಿ ತೊಡಗಿದ್ದ ಸುಮಾರು 10ರಿಂದ 15 ಜನರು ಮಣ್ಣಿನಡಿ ಹೂತುಹೋಗಿದ್ದಾರೆ 15ರಿಂದ 20 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ.
ಅಧಿಕಾರಿಗಳು ಸ್ಥಳದಲ್ಲಿದ್ದು, ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಹಾಗೇ, ಮಣ್ಣಿನಡಿ ಸಿಲುಕಿರುವವರನ್ನು ಹೊರಗೆ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.
ಭೂಕುಸಿತ ಸಂಭವಿಸಿದಾಗ ಕಾರ್ಮಿಕರು ಬೇರೆ ಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ಆಗ ಅವರ ವಾಹನಗಳು ಮಣ್ಣಿನಡಿ ಸಿಲುಕಿದೆ ಎಂದು ಹೇಳಿದ್ದಾರೆ.
ಹರಿಯಾಣದ ಕೃಷಿ ಸಚಿವ ಜೆಪಿ ದಲಾಲ್ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ಭೇಟಿದ್ದಾರೆ.