ಅಪ್ರಾಪ್ತೆಯ ಮೇಲೆ 10 ಜನ ಅಪ್ರಾಪ್ತರಿಂದ ಅತ್ಯಾಚಾರ ನಡೆದಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಬೆಲ್ಜಿಯಂನ ವೆಸ್ಟ್ ಫ್ಲಾಂಡರ್ಸ್ ಪ್ರಾಂತ್ಯದ ಅರಣ್ಯದಲ್ಲಿಯೇ ಈ ಘಟನೆ ನಡೆದಿದೆ. 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 10 ಅಪ್ರಾಪ್ತರು ಅತ್ಯಾಚಾರ ನಡೆಸಿದ್ದಾರೆ. ಬಾಲಕಿಯನ್ನು ಕಾಡಿಗೆ ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರ ಎನ್ನಲಾಗಿದೆ. ಅತ್ಯಾಚಾರ ಎಸಗಿದ ಬಾಲಕರು ಸುಮಾರು 11 ರಿಂದ 16 ವರ್ಷದ ಆಸುಪಾಸಿನಲ್ಲಿದ್ದ ಎಂದು ವರದಿಯಾಗಿದೆ.
ಈ ಘಟನೆಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಕೊರ್ಟ್ರಿಜ್ಕ್ ನಗರದಲ್ಲಿ ಬಾಲಕಿ ತನ್ನ ಗೆಳೆಯನೊಂದಿಗೆ ಹೊರಗಡೆ ತೆರಳಿದ್ದಳು. ಆತನ ಹಲವು ಸ್ನೇಹಿತರು ಕೂಡ ಅಲ್ಲಿಗೆ ಬಂದಿದ್ದರು. ಈ ವೇಳೆಯೇ ಈ ಆಘಾತಕಾರಿ ಘಟನೆ ನಡೆದಿದೆ. ಈಗಾಗಲೇ ಎಲ್ಲ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬೆಲ್ಜಿಯಂನಲ್ಲಿ ಅತ್ಯಾಚಾರ ಪ್ರಕರಣಕ್ಕೆ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ. ಅಲ್ಲಿನ ಸರ್ಕಾರವು ಜೂನ್ 2021 ರಲ್ಲಿ ಬಾಲಾಪರಾಧ ಕಾನೂನು ತಿದ್ದುಪಡಿ ಮಾಡಿದೆ. ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ ಶಿಕ್ಷೆಗೊಳಗಾದ 12 ವರ್ಷ ವಯಸ್ಸಿನ ಯುವಕರಿಗೆ ದೀರ್ಘಾವಧಿಯ ಬಂಧನ ವಿಧಿಸಲಾಗುತ್ತದೆ. ಅತ್ಯಾಚಾರ, ಗ್ಯಾಂಗ್-ಸಂಬಂಧಿತ ಹಿಂಸಾಚಾರದಲ್ಲಿ 16 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಬಾಲಾಪರಾಧಿಗಳನ್ನು ವಯಸ್ಕರಂತೆ ವಿಚಾರಣೆಗೆ ಒಳಪಡಿಸಬಹುದು ಎಂದು ಸ್ಥಳೀಯ ಸರ್ಕಾರ ಕಾನೂನು ಜಾರಿಗೊಳಿಸಿದೆ.