ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ತಾಯಿ
ಅಮರಾವತಿ: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಎಲಮಂಚಿಲಿ ಗ್ರಾಮದಲ್ಲಿ ಮಹಿಳೆಯೊಬ್ಬಳು ತನ್ನ ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚಿಂಟು ಚಿನಮಣಿ (45), ಅವರ ಪುತ್ರಿ ಜಾಹ್ನವಿ (18) ಮೃತ ದುರ್ದೈವಿಗಳು. ತಾಯಿ ಮತ್ತು ಇಬ್ಬರು ಮಕ್ಕಳು ಬೆಂಕಿ ಹಚ್ಚಿಕೊಂಡಿದ್ದು, ತಾಯಿ ಚಿಂಟು ಚಿನಮಣಿ ಮತ್ತು ಜಾಹ್ನವಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಓರ್ವ ಮಗಳಿಗೆ ಗಂಭೀರವಾಗಿ ಸುಟ್ಟಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಡೆದಿದ್ದೇನು?: ಚಿನಮಣಿ ಅವರ ಅತ್ತೆ ಆಸ್ತಿಯಲ್ಲಿ ತನ್ನ ಪಾಲು ನೀಡಲು ನಿರಾಕರಿಸಿದ್ದಾರೆ. ಆಕೆ, ಆಸ್ತಿಯ ಬಹುಪಾಲನ್ನು ತನ್ನ ಮಗಳಿಗೆ ನೀಡಿ, ಉಳಿದ ಪಾಲನ್ನು ಮಗನಿಗೆ ನಿಡಲು ಬಯಸಿದ್ದಳು. ಇದರಿಂದಾಗಿ ಅತೃಪ್ತಿಗೊಂಡ ಚಿನಮಣಿ ಆಹತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಎಂದು ಜಾಲ್ಮುರು ಎಸ್‌ಐ ಪಾರಿ ನಾಯ್ಡು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕುಟುಂಬದಲ್ಲಿ ಆಸ್ತಿವಿವಾದ ಏರ್ಪಟ್ಟಿದ್ದು, ಇದು ತಾರಕಕ್ಕೇರಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.