Hyderabad: ಗಾಂಜಾ ವ್ಯಸನಿಗೆ ಬಂತು ಖಾರದ ಕಣ್ಣೀರು

1 min read
Hyderabad Saaksha Tv

ಗಾಂಜಾ ವ್ಯಸನಿಗೆ ಬಂತು ಖಾರದ ಕಣ್ಣೀರು

ಹೈದರಾಬಾದ್: ತಾಯಿ 15 ವರ್ಷದ ಮಗನನ್ನು ಕಂಬಕ್ಕೆ ಕಟ್ಟಿ, ಕಣ್ಣಿಗೆ ಖಾರದ ಪುಡಿ ಹಾಕಿ, ಥಳಿಸಿರುವ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಕೊಡಾಡ್ ಎಂಬಲ್ಲಿ ನಡೆದಿದೆ.

ತನ್ನ 15 ವರ್ಷದ ಮಗ ಗಾಂಜಾ ವ್ಯಸನಿಯಾಗಿದ್ದು, ಇದನ್ನು ತಿಳಿದ ತಾಯಿ ಕೋಪಗೊಂಡು ಮಗನನ್ನು ಕಂಬಕ್ಕೆ ಕಟ್ಟಿ, ಕಣ್ಣಿಗೆ ಕಾರದ ಪುಡಿ ಹಾಕಿ ಥಳಸಿದ್ದಾಳೆ.

ತನ್ನ 15 ವರ್ಷದ ಮಗ ಗಾಂಜಾ ವ್ಯಸನಿಯಾಗುತ್ತಿರುವ ಬಗ್ಗೆ ಆತಂಕಗೊಂಡ ತಾಯಿ ಮಗನನ್ನು ಕಂಬಕ್ಕೆ ಕಟ್ಟಿಹಾಕಿದ್ದಾಳೆ.  ನಂತರ ಮತ್ತೊಬ್ಬ ಮಹಿಳೆ ಆತನ ಕೈ ಹಿಡಿದು ಆತನ ಕಣ್ಣಿಗೆ ಮೆಣಸಿನ ಪುಡಿ ಉಜ್ಜಿದ್ದಾಳೆ. ಉರಿಯಿಂದಾಗಿ ಯುವಕ ಕಿರುಚಾಡಿದ್ದಾನೆ.

ನಂತರ ಕೆಲವು ನೆರೆಹೊರೆಯವರು  ಬಾಲಕನ ತಾಯಿಗೆ ನೀರು ಹಾಕುವಂತೆ ಸಲಹೆ ನೀಡಿದರು. ಆದರೆ ಇದಕ್ಕೆ ಒಪ್ಪದ ತಾಯಿ ಗಾಂಜಾ ಸೇದುವ ಅಭ್ಯಾಸವನ್ನು ಬಿಡುವುದಾಗಿ ಭರವಸೆ ನೀಡಿದ ನಂತರವೇ ಮಗನನ್ನು ಬಿಟ್ಟಿದ್ದಾಳೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd