ವ್ಯಕ್ತಿಯೊಬ್ಬ ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ವಿಚ್ಛೇದನ ನೀಡದೆ, ಹಿಂದೂ ಯುವತಿಯನ್ನು ಮದುವೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ದಾಂಡೇಲಿ (Dandeli)ಯ ವಿಜಯ ನಗರದ ನಿವಾಸಿ ನೂರ್ ಜಹಾನ್ ಹಾಗೂ ದಾಂಡೇಲಿಯ ಪಟೇಲ್ ನಗರ ನಿವಾಸಿ ಖಾದರ್ ಅಲಿ ಹಸನ್ ಸಾಬ್ ಶೇಖ್ (27) 7 ವರ್ಷಗಳಿಂದ ಪರಸ್ಪರ ಪ್ರೀತಿಸಿ, ಕಳೆದ ವರ್ಷ ವಿವಾಹವಾಗಿದ್ದರು. ಆದರೆ, ಇತ್ತೀಚೆಗೆ ಯುವತಿಗೆ, ಹುಡುಗನ ಮನೆಯವರು ಕಿರುಕುಳ ನೀಡಲು ಆರಂಭಿಸಿದ್ದರು. ಈ ವೇಳೆ ಬೇರೆ ಮನೆ ಮಾಡೋಣ ಎಂದು ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದ. ಈ ಸಂದರ್ಭದಲ್ಲಿ ಬೇರೆ ಯುವತಿಯೊಂದಿಗೆ ಚಕ್ಕಂದ್ ಆರಂಭಿಸಿದ್ದಾರೆ.
ಇದು ಮಹಿಳೆಗೆ ಗೊತ್ತಾಗಿ ಠಾಣೆ ಮೆಟ್ಟಿಲು ಏರಿದ್ದಾಗ, ಹಿರಿಯ ಅಧಿಕಾರಿಗಳು ರಾಜಿ ಪಂಚಾಯ್ತಿ ನಡೆಸಿದ್ದರು. ಆದರೆ, ಆತ ತನ್ನ ಕಾಯಕ ಮುಂದುವರೆಸಿದ್ದ. ಪತ್ನಿಯನ್ನು ತಾಯಿ ಮನೆಯಲ್ಲಿರಿಸಿ ಪತ್ನಿಗೆ ತಿಳಿಯದಂತೆ ಎರಡು ವರ್ಷಗಳ ಕಾಲ ವಿದೇಶಕ್ಕೆ ತೆರಳಿದ್ದ. ನಂತರ ಮರಳಿ ಬಂದರೂ ಸರಿಯಾಗಿ ಸಂಸಾರ ಮಾಡಿಲ್ಲ.
ಇದರ ಮಧ್ಯೆ ಇತ್ತೀಚೆಗೆ ಹಿಂದೂ ಯುವತಿಯೊಂದಿಗೆ ಮದುವೆಯಾಗಿದ್ದಾರೆ. ಸುಳ್ಳು ಮಾಹಿತಿ ನೀಡಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾನೆ. ಹೀಗಾಗಿ ಮೊದಲ ಪತ್ನಿ, ಈ ಮದುವೆಗೆ ಮಾನ್ಯತೆ ನೀಡಬಾರದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.