ನಂದಿನಿ ಹೆಸರಲ್ಲಿ ನಕಲಿ ತುಪ್ಪ ತಯಾರಿಕಾ ಘಟಕ ಪತ್ತೆ….
ಕೆಂ ಎಂ ಎಫ್ ಕಂಪನಿಯ ಜನಪ್ರಿಯ ನಂದಿನ ಬ್ರಾಂಡ್ ನ ಹೆಸರಿನಲ್ಲಿ ನಕಲಿ ತುಪ್ಪ ತಯಾರಿಕೆ ಮಾಡಿ ಮಾರಟಮಾಡುತ್ತಿದ್ದ ಜಾಲ ಪತ್ತೆಯಾಗಿದೆ.
ಚಾಮುಂಡಿಬೆಟ್ಟ ಹಿಂಭಾಗದ ಹೊಸಹುಂಡಿ ಗ್ರಾಮದಲ್ಲಿ ನಂದಿನಿ ಹೆಸರಿನೆ ನಕಲಿ ತುಪ್ಪ ಬೃಹತ್ ತಯಾರಿಕಾ ಘಟಕ ಪತ್ತೆಯಾಗಿದೆ. ಟನ್ ಗಟ್ಟಲೆ ನಕಲಿ ತುಪ್ಪವನ್ನ ಗೋಡೌನ್ ನಲ್ಲಿ ದಾಸ್ತಾನು ಮಾಡಲಾಗಿದೆ, ಜೊತೆಗೆ ನಂದಿನಿ ಲೇಬಲ್ ಗಳ ಮುದ್ರಣ ಯಂತ್ರಗಳು ಪತ್ತೆಯಾಗಿವೆ.
ಜೀವನ್ ತುಪ್ಪ ಕಂಪನಿಯವರಿಂದ ಈ ನಕಲಿ ಜಾಲ ಬಹಿರಂಗಗೊಂಡಿದೆ, ಸ್ಥಳಕ್ಕೆ ಮೈಮುಲ್ ಎಂಡಿ ನಕಲಿ ತುಪ್ಪ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.