ಡಿಜಿಟಲ್ ದೇಶವಾಗಿ (Digital India) ಭಾರತ ಬದಲಾಗುತ್ತಿದೆ. ಮೊಬೈಲ್ ಬಳಕೆದಾರರ (M obile Users) ಸಂಖ್ಯೆಯೂ ಹೆಚ್ಚಾಗುತ್ತಿದೆ.
ಮಾರುಕಟ್ಟೆಗೆ ಹೊಸ ಹೊಸ ಮಾದರಿಯಲ್ಲಿ ಸ್ಮಾರ್ಟ್ಫೋನ್ಗಳು ಲಾಂಚ್ ಆಗುತ್ತಲೇ ಇದೆ. ಪ್ರೀಮಿಯಮ್ ಮಾದರಿಯಲ್ಲಿ ಸ್ಮಾರ್ಟ್ಫೋನ್ಗಳನ್ನು (Smartphones) ಬಿಡುಗಡೆ ಮಾಡುವ ಮೂಲಕ ಆ್ಯಪಲ್ (Apple), ಸ್ಯಾಮ್ಸಂಗ್ (Samsung), ಒನ್ಪ್ಲಸ್ (Oneplus), ಒಪ್ಪೋ ಕಂಪನಿಗಳು ಭಾರೀ ಮುಂಚೂಣಿಯಲ್ಲಿವೆ.
ಭಾರತವಂತೂ ಟೆಕ್ನಾಲಜಿ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡುತ್ತಿದೆ ಎಂದು ಹೇಳಬಹುದು. ಭಾರತ ವಿಶ್ವದಲ್ಲೇ ಅತೀ ಹೆಚ್ಚು ಮೊಬೈಲ್ ಉತ್ಪಾದನೆಯಲ್ಲಿ 2ನೇ ದೇಶವಾಗಿ ಗುರುತಿಸಿಕೊಂಡಿದೆ. ವಿಶ್ವದ ಎರಡನೇ ಅತೀದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿ ಗುರುತಿಸಿಕೊಂಡಿದೆ ಎಂದು ವರದಿಯೊಂದು ಹೇಳಿದೆ. ದೇಶದಲ್ಲಿ ಉತ್ಪಾದಿಸಿದ 2 ಬಿಲಿಯನ್ ಮೊಬೈಲ್ ಫೋನ್ ಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡಿದೆ. ಈ ಮೂಲಕ ದೇಶದ ಘನತೆ ಇನ್ನಷ್ಟು ಹೆಚ್ಚಾಗಿದೆ