ವಿಮಾನ ಟೇಕ್ ಆಫ್ ಆಗುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಇಂಜಿನ್ ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನೆದರ್ಲೆಂಡ್ ನ ಆಮ್ಸ್ಟರ್ಡಾಂನ ಶಿಪೋಲ್ ವಿಮಾನ ನಿಲ್ದಾಣ(Airport)ದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. KL1341 ವಿಮಾನವು ಡೆನ್ಮಾರ್ಕ್‌ನ ಬಿಲ್ಲುಂಡ್‌ಗೆ ಟೇಕ್ ಆಫ್ ಮಾಡಲು ಸಿದ್ಧವಾಗಿತ್ತು. ಈ ಸಂದರ್ಭದಲ್ಲಿ ಈ ಅವಘಡ ನಡೆದಿದೆ.
ವಿಮಾನವು ಟೇಕ್ ಆಫ್ ಆಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಜೆಟ್ ನ ತಿರುಗುವ ಟರ್ಬೈನ್ ಗೆ ಬಿದ್ದಿದ್ದಾರೆ. ಆದರೆ, ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಈ ಘಟನೆಯ ನಂತರ ವಿಮಾನ ಪ್ರಯಾಣ ರದ್ದು ಮಾಡಿ, ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.
ಕಳೆದ ವರ್ಷ, ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಲ್ಲಿ 27 ವರ್ಷದ ವಿಮಾನ ನಿಲ್ದಾಣದ ಸಿಬ್ಬಂದಿ, ಡೆಲ್ಟಾ ಪ್ರಯಾಣಿಕ ವಿಮಾನದ ಇಂಜಿನ್‌ನಲ್ಲಿ ಸಿಲುಕಿ ಸಾವನ್ನಪ್ಪಿದರು. ಸಾವನ್ನಪ್ಪಿರುವ ವ್ಯಕ್ತಿ ಟಗ್ ನಿರ್ವಾಹಕರು ಅಥವಾ ವಿಮಾನ ನಿಲ್ದಾಣದ ಸಿಬ್ಬಂದಿಯಾಗಿರಬಹುದು ಎಂದು ಶಂಕಿಸಲಾಗಿದೆ.