ಮಂಗಳೂರು: ದೈವ ನರ್ತನದ ವೇಳೆ ದೈವ ನರ್ತನರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಮಂಗಳೂರು ತಾಲೂಕಿನ ಹಳೆಯಂಗಡಿ ಹತ್ತಿರ ಈ ಘಟನೆ ನಡೆದಿದೆ. ಪದವಿನಂಗಡಿ ಗಂಧಕಾಡು ನಿವಾಸಿ 47 ವರ್ಷದ ದೈವ ನರ್ತಕ ಅಶೋಕ್ ಬಂಗೇರ ಸಾವನ್ನಪ್ಪಿದ್ದಾರೆ. ಹಳೆಯಂಗಡಿ ಹತ್ತಿರ ರಕ್ತೇಶ್ವರಿ ದೈವ ನೇಮ ಆಯೋಜಿಸಲಾಗಿತ್ತು.
ದೈವ ನರ್ತನದ ಅಶೋಕ್ ಬಂಗೇರ ಅವರಿಗೆ ಲಘುವಾಗಿ ಎದೆನೋವು ಕಾಣಿಸಿಕೊಂಡಿತ್ತು. ಈ ನಿಟ್ಟಿನಲ್ಲಿ ಅರ್ಧಕ್ಕೆ ನಿಲ್ಲಿಸಿ, ಅಶೋಕ ಬಂಗೇರಾ ಆಸ್ಪತ್ರೆಗೆ ತೆರಳಿದ್ದರು. ಆದರೆ, ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದಾರೆ.