ಚಿಕ್ಕಮಗಳೂರು: ಒಡಿಶಾದಲ್ಲಿ ಜೂನ್ 2ರಂದು ಭಯಾನಕ ಅಪಘಾತ ಸಂಭವಿಸಿದ್ದು, ನೂರಾರು ಜನರು ಸಾವನ್ನಪ್ಪಿದ್ದರು. ಈ ಪೈಕಿ ಯಾತ್ರೆಗೆ ತೆರಳಿದ್ದ ಕನ್ನಡಿಗರು ಪವಾಡವೆಂಬಂತೆ ಬದುಕಿದ್ದರು. ಹೀಗೆ ಉಳಿದವರ ಪೈಕಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಕಳಸದಿಂದ ಸುಮೇದ್ ಶಿಖರ್ಜಿಗೆ 110 ಜನರು ತೆರಳಿದ್ದರು. ಅವರೆಲ್ಲ ಅಪಘಾತದಲ್ಲಿ ಪಾರಾಗಿದ್ದರು. ಆದರೆ, ಓರ್ವ ಯಾತ್ರಿಕರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಧರ್ಮಪಾಲಯ್ಯ(61) ಮೃತ ದುರ್ದೈವಿ. ರೈಲು ಅಪಘಾತವಾದ ಬಳಿಕ ಸುಮೇದ್ ಶಿಖರ್ಜಿಗೆ ತೆರೆಳಿದ್ದರು. ಸದ್ಯ ಅಲ್ಲಿಂದ ಮರಳಿ ಬರುತ್ತಿರುವಾಗ ಹೃದಯಾಘಾತ ಸಂಭವಿಸಿ ಕಳಸ ತಾಲೂಕಿನ ಕಳಕೋಡು ನಿವಾಸಿ, ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೆಷನ್ ನಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಯಾತ್ರಿಕರು ಮೃತ ದೇಹಕ್ಕಾಗಿ ಕಾಯುತ್ತಿದ್ದಾರೆ.