ನವದೆಹಲಿ: ದೇಹ ಸದೃಢವಾಗಿಸುತ್ತದೆ ಎಂದು ವ್ಯಕ್ತಿಯೊಬ್ಬ ನಾಣ್ಯ ಹಾಗೂ ಆಯಸ್ಕಾಂತ ನುಂಗಿರುವ ಘಟನೆಯೊಂದು ನಡೆದಿದೆ.
ಸದ್ಯ ವೈದ್ಯರು ಈ ವ್ಯಕ್ತಿಯ ಹೊಟ್ಟೆಯಿಂದ 39 ನಾಣ್ಯಗಳು, 37 ಅಯಸ್ಕಾಂತಗಳನ್ನು ಹೊರ ತೆಗೆದಿದ್ದಾರೆ. ದೆಹಲಿಯ 26 ವರ್ಷದ ರೋಗಿಯೊಬ್ಬ ಕಳೆದ 20 ದಿನಗಳಿಂದ ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಈ ವೇಳೆ ವೈದ್ಯರು ಎಕ್ ರೇ ಮಾಡಿ ನೋಡಿದಾಗ ನಾಣ್ಯಗಳು ಹಾಗೂ ಆಯಸ್ಕಾಂತ ಇರುವುದು ಬೆಳಕಿಗೆ ಬಂದಿದೆ. ಸದ್ಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರ ತೆಗೆದಿದ್ದಾರೆ.
ವ್ಯಕ್ತಿಯ ಹೊಟ್ಟೆಯಿಂದ 1, 2, 5 ರೂ.ಗಳ ನಾಣ್ಯಗಳು ಮತ್ತು ಹೃದಯ, ಗೋಳ, ನಕ್ಷತ್ರ, ಬುಲೆಟ್ ಹಾಗೂ ತ್ರಿಕೋನ ಆಕಾರದ ಅಯಸ್ಕಾಂತಗಳನ್ನು ಹೊರತೆಗೆಯಲಾಗಿದೆ. ಈ ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ದೇಹ ಗಟ್ಟಿಯಾಗುತ್ತದೆ ಎಂದು ಹೀಗೆ ಮಾಡಿದ್ದಾನೆ ಎನ್ನಲಾಗಿದೆ.