ಬೆಕ್ಕುಗಳಿಗೆ ಸೀಮಂತ ಕಾರ್ಯ ನಡೆಸಿದ ಕುಟುಂಬಸ್ಥರು….
ಕೆಲವೊಮ್ಮೆ ಮನುಷ್ಯರು ಪ್ರಾಣಿಗಳೊಂದಿಗೆ ಅದೆಷ್ಟು ಹೊಂದಿಕೊಂಡಿರುತ್ತಾರೆಂದರೆ ಪ್ರಾಣಿಗಳನ್ನ ತಮ್ಮ ಮನೆಯ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ. ತಮಿಳುನಾಡಿನ ಕೋಯಬಂತ್ತೂರಿನಲ್ಲಿ ಕುಟುಂಬವೊಂದು ಬೆಕ್ಕುಗಳಿಗೆ ಸೀಮಂತ ಕಾರ್ಯ ನೆರೆವೇರಿಸಿದ್ದು, ಪೊಟೋಗಳು ವೈರಲ್ ಆಗಿವೆ..
ಸಾಕುಪ್ರಾಣಿಗಳ ಕ್ಲೀನಿಕ್ ನಲ್ಲಿ ತಮ್ಮ ಎರಡು ಮುದ್ದಾದ ಬೆಕ್ಕುಗಳನ್ನ ಅಲಂಕರಿಸಿ ಸೀಮಂತ ನೆರವೇರಿಸಿದ್ದಾರೆ. ಬೆಕ್ಕುಗಳು ಸಹ ನಮ್ಮ ಕುಟುಂಬ ಸದಸ್ಯರಂತೆ ಅದಕ್ಕಾಗಿ ನಾವು ಪಶುಚಿಕಿತ್ಸಾಲಯದಲ್ಲಿ ಬೆಕ್ಕುಗಳಿಗೆ ಸೀಮಂತ ಆಯೋಜಿಸಿದ್ದೇವೆ ಎಂದು ಬೆಕ್ಕಿನ ಮಾಲಿಕರು ಹೇಳಿದ್ದಾರೆ.
ಕ್ಷೀರಾ ಮತ್ತು ಐರಿಸ್ ಎಂಬ ಎರಡು ಹೆಣ್ಣು ಬೆಕ್ಕುಗಳು 50 ಮತ್ತು 30 ದಿನಗಳ ಗರ್ಭಾವಸ್ಥೆಯಲ್ಲಿವೆ ಎಂದು ಅಲ್ಲಿನ ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.
ಬೆಕ್ಕಿಗೆ ಸೀಮಂತ ಶಾಸ್ತ್ರ ಮಾಡಿದ ಪೋಟೋ ಮತ್ತು ವೀಡಿಯೋಗಳು ವೈರಲ್ ಆಗಿವೆ.
Tamil Nadu | A pet parent in Coimbatore performed a baby shower ritual for her cats
People conduct baby showers for humans so we did the same for our cats as they are a member of our family. We came to the clinic & organized the baby shower along with the doctors,said pet parent pic.twitter.com/YketB5BJap
— ANI (@ANI) January 2, 2022