ದೂರು ನೀಡಲು ಹೋದ ಸಂತ್ರಸ್ತೆ ಮೇಲೆ ಮತ್ತೊಮ್ಮೆ ಅತ್ಯಾಚಾರವೆಸಗಿದ ಪೊಲೀಸ್
ಉತ್ತರ ಪ್ರದೇಶ: ಅತ್ಯಾಚಾರದ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಪೊಲೀಸ್ ಅಧಿಕಾರಿಯೇ ಬಾಲಿಕಿ ಮೇಲೆ ಮತ್ತೊಮ್ಮೆ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
13 ವರ್ಷದ ಬಾಲಕಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ನಾಲ್ವರ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಪೊಲೀಸ್ ಅಧಿಕಾರಿಯೇ ಬಾಲಿಕಿ ಮೇಲೆ ಮತ್ತೊಮ್ಮೆ ಅತ್ಯಾಚಾರವೆಸಗಿದ್ದಾನೆ. ಬಾಲಕಿ ತನ್ನ ಮೇಲಾದ ದೌರ್ಜನ್ಯವನ್ನು ಸಹಾಯವಾಣಿ ತಂಡದವರ ಬಳಿ ಹೇಳಿಕೊಂಡಿದ್ದಾಳೆ.
ನಂತರ ಮಕ್ಕಳ ಸಹಾಯವಾಣಿ ತಂಡ ಪೋಲೀಸರು ಎಸ್‌ಎಚ್‌ಒ ಮತ್ತು ಆಕೆಯ ಚಿಕ್ಕಮ್ಮ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಸ್‌ಎಚ್‌ಒ ಅವರನ್ನು ಅಮಾನತುಗೊಳಿಸಲಾಗಿದೆ.
ನಡೆದಿದ್ದೇನು?: ಮೂಲಗಳ ಪ್ರಕಾರ ಏಪ್ರಿಲ್ 22 ರಂದು ನಾಲ್ವರು ಸ್ಥಳೀಯ ಪುರುಷರು ತನ್ನ ಮಗಳನ್ನು ಅಪಹರಿಸಿ ಭೋಪಾಲ್‌ಗೆ ಕರೆದೊಯ್ದಿದ್ದಾರೆ. ಅವರು ಮೂರು ದಿನಗಳ ಕಾಲ ಭೋಪಾಲ್‌ನಲ್ಲಿ ತಂಗಿದ್ದರು ಮತ್ತು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ನಂತರ ಏಪ್ರಿಲ್ 26 ರಂದು ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಾಲಕಿಯನ್ನು ಬಿಟ್ಟು ಹೋಗಿದ್ದರು.
ಬಳಿಕ ಸಂತ್ರಸ್ತೆಯನ್ನು ಆಕೆಯ ಚಿಕ್ಕಮ್ಮನಿಗೆ ಒಪ್ಪಿಸಲಾಯಿತು. ಮರುದಿನ ಪೊಲೀಸರು ಬಾಲಕಿಯನ್ನು ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅದೇ ದಿನ ಸಂಜೆ ಬಾಲಕಿಯ ಚಿಕ್ಕಮ್ಮ ಆಕೆಯನ್ನು ಠಾಣೆಯ ಗೃಹ ಅಧಿಕಾರಿಯ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ.








