ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ Saaksha Tv
ಶಿವಮೊಗ್ಗ: ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಾಗರದ ಕೆಳದಿ ಗ್ರಾಮದಲ್ಲಿ ನಡೆದಿದೆ.
ಕೆಳದಿ ಗ್ರಾಮದ ಕೆನರಾ ಬ್ಯಾಂಕ್ಗೆ ಕಳೆದ ಹತ್ತಾರು ವರ್ಷಗಳಿಂದ ಬ್ಯಾಂಕ್ ಮಿತ್ರ ಎಂಬ ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಇದರಲ್ಲಿ ಕೆಲಸ ಮಾಡುತ್ತಿದ್ದವರನ್ನು ಬ್ಯಾಂಕ್ ಸಿಬ್ಬಂದಿ ಏಕಾಏಕಿ ಕೆಲಸದಿಂದ ತೆಗೆದು ಹಾಕಿದನ್ನು ವಿರೋಧಿಸಿ ಬ್ಯಾಂಕ್ ಮಿತ್ರ ನೌಕರರು ನಿನ್ನೆಯಿಂದ ಬ್ಯಾಂಕ್ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು. ಇಂದು ಧರಣಿ 2ನೇ ದಿನಕ್ಕೆ ಕಾಲಿಟ್ಟಿತ್ತು.
ಧರಣಿ ನಿರತರು ಧರಣಿ ನಡೆಸುವಾಗ ಶಂಕುತಲಾ ಎಂಬುವರು ತಮ್ಮ ಬ್ಯಾಗ್ ನಿಂದ ವಿಷದ ಬಾಟಲಿ ತೆಗೆದು ಕುಡಿಯಲು ಯತ್ನಿಸಿದಾಗ ಶಂಕುತಲಾ ಅವರ ಪಕ್ಕದಲ್ಲಿಯೇ ಇದ್ದ ಮಹಿಳೆಯೊಬ್ಬರು ವಿಷದ ಬಾಟಲಿಯನ್ನು ಕಿತ್ತು ಬಿಸಾಡುತ್ತಾರೆ.
ಶಂಕುತಲಾ ಅವರ ಮೇಲೆಲ್ಲಾ ವಿಷ ಚೆಲ್ಲಿದ್ದರಿಂದ ಅವರನ್ನು ಸಾಗರ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.