ದಕ್ಷಿಣ ಕನ್ನಡ: ಪಿಯುಸಿಯಲ್ಲಿ ಓದುತ್ತಿದ್ದ ವಿದ್ಯಾರ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದಿದ್ದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತರ್ಚಿಹಾಳ ಮೂಲದ ಮನೋಜ್(18) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ ಎನ್ನಲಾಗಿದೆ. ಮನೋಜ್ ಮೂಡಬಿದ್ರೆಯ ಖಾಸಗಿ ಕಾಲೇಜ್ ಆಳ್ವಾಸ್ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ಎನ್ನಲಾಗಿದೆ.
ಕಾಲೇಜಿನ ಹಾಸ್ಟೆಲ್ ಬಾತ್‌ರೂಂ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಆತ್ಮಹತ್ಯೆಯ ಹಿಂದಿನ ಕಾರಣಗಳು ತಿಳಿದು ಬಂದಿಲ್ಲ. ತಾವು ಬರುವವರೆಗೂ ಶವ ಹೊರ ತೆಗೆಯದಂತೆ ಪಟ್ಟು ಹಿಡಿದಿರುವ ಮನೋಜ್ ಪೋಷಕರು ಘಟನೆ ತಿಳಿದ ಕೂಡಲೇ ಹಾಸ್ಟೆಲ್‌ನತ್ತ ದೌಡಾಯಿಸಿದ್ದಾರೆ. ಈ ಕುರಿತು ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.