ಯುಎಇ ಮತ್ತು ಇಸ್ರೇಲ್ ನಡುವೆ ರಿಂಗಣಿಸಿದ ದೂರವಾಣಿ ಕರೆ
ದುಬೈ, ಅಗಸ್ಟ್ 17: ಯುಎಇ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧ ಸಹಜ ಸ್ಥಿತಿಗೆ ಬಂದ ಬಳಿಕ ಉಭಯ ದೇಶಗಳ ನಡುವೆ ಟೆಲಿಫೋನ್ ಸಂಪರ್ಕ ಪ್ರಾರಂಭವಾಗಿದೆ.
ಯುಎಇ ಮತ್ತು ಇಸ್ರೇಲ್ ನಡುವೆ ಟೆಲಿಫೋನ್ ಸಂಪರ್ಕ ಪ್ರಾರಂಭವಾದ ನಂತರ ಉಭಯ ದೇಶಗಳ ವಿದೇಶಾಂಗ ಮಂತ್ರಿಗಳು ಭಾನುವಾರ ದೂರವಾಣಿ ಕರೆ ಮೂಲಕ ಮಾತನಾಡಿದರು.

ಇಸ್ರೇಲ್ ನ ಗಬಿ ಅಶ್ಕೆನಾಜಿ ಅವರು ಯುಎಇ ವಿದೇಶಾಂಗ ಮಂತ್ರಿ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಅವರಿಗೆ ಶೀಘ್ರದಲ್ಲೇ ಭೇಟಿಯಾಗೋಣ ಎಂದು ಕರೆ ಮಾಡಿದ ಸಂದರ್ಭದಲ್ಲಿ ಹೇಳಿದರು. ಇಸ್ರೇಲಿನ ಬಹುತೇಕ ನ್ಯೂಸ್ ವೆಬ್ ಸೈಟ್ ಗಳನ್ನು ಈ ಹಿಂದೆ ಯುಎಇಯಲ್ಲಿ ನಿಷೇಧಿಸಲಾಗಿತ್ತು. ಭಾನುವಾರದಿಂದ ಯುಎಇನಲ್ಲಿ ಇಂಟರ್ ನೆಟ್ ಸಂಪರ್ಕದೊಂದಿಗೆ ವೀಕ್ಷಿಸಬಹುದಾಗಿದೆ.
ಅಮೆರಿಕ ನಡೆಸಿದ ಸಂಧಾನದ ಹಿನ್ನೆಲೆಯಲ್ಲಿ ಯುಎಇ ಮತ್ತು ಇಸ್ರೇಲ್ ಜೊತೆಗೆ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಇಸ್ರೇಲ್ ಪಶ್ಚಿಮ ದಂಡೆಯ ಅತಿಕ್ರಮಿತ ಪ್ರದೇಶವನ್ನು ಬಿಟ್ಟುಕೊಡಲು ಒಪ್ಪಿಕೊಂಡಿದೆ.

ಆದರೆ ಇದು ಪ್ಯಾಲೆಸ್ಟೀನಿಯಾದ ಮತ್ತು ಇಸ್ರೇಲ್ ವಿರೋಧಿ ದೇಶ ಇರಾನ್ ನ ಕೋಪಕ್ಕೆ ಕಾರಣವಾಯಿತು.ಪಾಕಿಸ್ತಾನದ ಪ್ರತಿಭಟನಾಕಾರರು ಯುಎಇ ಮತ್ತು ಇರಾನ್ ಒಪ್ಪಂದಕ್ಕೆ ಒತ್ತಾಯಿಸಿದ್ದಾರೆ. ಎಮಿರೇಟ್ಸ್ ಪ್ರಸ್ತುತ ಇಸ್ರೇಲ್ ಜೊತೆಗೆ ಶಾಂತಿ ಒಪ್ಪಂದವನ್ನು ಮಾಡಿಕೊಂಡಿರುವ ಮೊದಲ ಅರಬ್ ರಾಷ್ಟ್ರವಾಗಿದೆ.








